- Saturday
- November 23rd, 2024
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಧನಂಜಯ ಕುಮಾರ್ ಕೋಟೆಮಲೆ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ವಂದನಾ ಹೆಚ್ ಆರ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅರಬಣ್ಣ ಪೂಜಾರ ಆಗಮಿಸಿದ್ದರು.
✍️ ಭಾಸ್ಕರ ಜೋಗಿಬೆಟ್ಟು ಕಲ್ಮಡ್ಕ: ಸುಳ್ಯ ತಾಲೂಕಿನ ಅದೊಂದು ಪುಟ್ಟ ಗ್ರಾಮ . ಆ ಗ್ರಾಮಕ್ಕೆ ಸಂಬಂಧ ಪಟ್ಟ ಜೋಗಿಬೆಟ್ಟು ಎಂಬ ಸಣ್ಣ ಊರು. ಜೋಗಿಬೆಟ್ಟು ಮಂಞನಕಾನ ರಸ್ತೆಯು ನಡೆದುಕೊಂಡು ಹೋಗಲಾರದಷ್ಟು ಹದೆಗಟ್ಟಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ಜನರ ಓಡಾಟ….ನಡೆದಾಡಲು ಶಾಲಾ ಮಕ್ಕಳ ಪರದಾಟ…!! ಅದೇನು ದೊಡ್ಡ ವಿಚಾರ ಅಂದುಕೊಂಡಿರ …?? ಈ ರಸ್ತೆಯು...
ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು. ಒಟ್ಟು 10 ಮಂದಿ ಸದಸ್ಯರಿದ್ದು, ಬಿಜೆಪಿ ಬೆಂಬಲಿತ ಸದಸ್ಯರು 9 ಮಂದಿ, ಕಾಂಗ್ರೆಸ್ ಬೆಂಬಲಿತ ಸದಸ್ಯರು ಓರ್ವರು ಇದ್ದಾರೆ.
ಸುಬ್ರಹ್ಮಣ್ಯದ ಗಗನ ಇನ್ನರ್ವೀಲ್ ಕ್ಲಬ್ ವತಿಯಿಂದ ಕ್ಲಬ್ ನ ಅಧ್ಯಕ್ಷ ವೇದ ಶಿವರಾಂ ಅವರ ಏನೆಕಲ್ಲು ಮನೆಯಲ್ಲಿ ಆಗಸ್ಟ್ 5 ಆದಿತ್ಯವಾರ ಆಚರಿಸಲಾಯಿತು . ಆಟಿಯಲ್ಲಿ ಮಾಡತಕ್ಕ ವಿವಿಧ ಖಾದ್ಯಗಳನ್ನು ಪ್ರತಿಯೊಬ್ಬ ಸದಸ್ಯರು ಮನೆಯಲ್ಲಿ ಮಾಡಿ ತಂದು ಒಟ್ಟಿಗೆ ಸೇರಿ ಸಂತೋಷಕೂಟದೊಂದಿಗೆ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು .ಹಾಗೂ ಆಟಿಯ...
ಎ.ಕೆ.ಸಿಂಗ್ ಅಡಿಷನಲ್ P.C.C.F IFS ಅರಣ್ಯ ಭವನ ಬೆಂಗಳೂರು ರವರು ಇಂದು ಸುಳ್ಯ ರಬ್ಬರ್ ಪ್ಲಾಂಟೇಶನ್ ಮತ್ತು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .ಈ ಸಂದರ್ಭದಲ್ಲಿ ತೋಟ ತೊಳಿಲಾಲರ್ ಸಂಘ ಸುಳ್ಯ T.T.S. ಕಾರ್ಮಿಕ ಸಂಘದ ಅಧ್ಯಕ್ಷರು ಚಂದ್ರಲಿಂಗಮ್ ಮತ್ತು ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಕಾರ್ಮಿಕರ ಇ.ಎಸ್.ಐ ಸೌಲಭ್ಯದ ಬಗ್ಗೆ ಮತ್ತು ಕಾರ್ಮಿಕರಿಗೆ...
ಕಲ್ಮಡ್ಕ ಗ್ರಾ.ಪಂ.ನ ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಉಪಾಧ್ಯಕ್ಷರಾಗಿ ಮೋಹಿನಿ ಮಾಳಪ್ಪಮಕ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ನ ಎಲ್ಲಾ ಸದಸ್ಯರೂ ಉಪಸ್ಥಿತರಿದ್ದುದರಿಂದ ಅವರೆಲ್ಲರ ಒಪ್ಪಿಗೆಯ ಮೇರೆಗೆ ಚುನಾವಣಾ ಪ್ರಕ್ರಿಯೆಯನ್ನು ಒಂದು ಗಂಟೆ ಮೊದಲು ನಡೆಸಲಾಯಿತು.ಚುನಾವಣಾಧಿಕಾರಿಯಾಗಿ ವಲಯಾರಣ್ಯಾಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದರು. ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣರು ಸಹಕರಿಸಿದರು. ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್, ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಪವಿತ್ರ...
ಮಡಪ್ಪಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆ.9 ರಂದು ನಡೆಯಿತು. ನೂತನ ಅಧ್ಯಕ್ಷರಾಗಿ ಉಷಾ ಜಯರಾಮ್, ಉಪಾಧ್ಯಕ್ಷರಾಗಿ ಸುಜಾತಾ ಹಾಡಿಕಲ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಮುಂದಿನ ಎರಡುವರೆ ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆ ಇಂದು(ಆ.09) ನಡೆಯಿತು.ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಇದ್ದು, ಅಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾದ ಜಯಂತ...
ಸಂಪಾಜೆ ಗ್ರಾಮದಲ್ಲಿ ಜಿ ಕೆ ಹಮೀದ್ ಬಣ ಗೆಲುವು ಅಧ್ಯಕ್ಷ ಪದವಿ ಅವಿರೋಧ ಆಯ್ಕೆಯಾದರೆ ಉಪಾಧ್ಯಕ್ಷ ಪದವಿಗೆ ಅಬುಸಾಲಿ ಮತ್ತು ಎಸ್ ಕೆ ಹನೀಫ್ ಇವರ ಮಧ್ಯೆ ಚುನಾವಣೆ ನಡೆದು ಇದಣಿಗ ಪಲಿತಾಂಶ ಹೊರಬಿದ್ದಿದೆ ಉಪಾಧ್ಯಕ್ಷರಾಗಿ ಎಸ್ ಕೆ ಹನೀಫ್ 9 ಮತಗಳನ್ನು ಪಡೆದರೆ ಅಬುಸಾಲಿ 5 ಮತ ಪಡೆದು ಪರಾಜಿತರಾದರು.
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಆ.9 ರಂದು ನಿಗದಿಯಾಗಿತ್ತು. ಅಧ್ಯಕ್ಷತೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಸುಲೋಚನ ದೇವ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷತೆಗೆ ಲೀಲಾವತಿ ಡಿ ನಾಮಪತ್ರ ಸಲ್ಲಿಸಿದ್ದರು. ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಅವರ ಪರ ಮತ್ತು ವಿರೋಧಿ ಬಣಗಳ ಮಧ್ಯೆ ಸಮನ್ವಯ ಬಾರದೇ ಇದ್ದ ಹಿನ್ನೆಲೆಯಲ್ಲಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದ ಸುಲೋಚನ ದೇವ...
Loading posts...
All posts loaded
No more posts