
ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಇದರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಮುಂಭಾಗದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಪಿಲ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಜೆ ಬಿ, ಗೌರವಾಧ್ಯಕ್ಷರಾದ ವಿಶುಕುಮಾರ್ ಕಾನತ್ತಿಲ, ಮಾಜಿ ಅಧ್ಯಕ್ಷರಾದ ಚೇತನ್ ಜಟ್ಟಿಪಳ್ಳ, ಶ್ರೀರಾಮ ಭಜನಾ ಸೇವಾ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಚೈತನ್ಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಹೇಶ್ ಜಟ್ಟಿಪಳ್ಳ, ಹಾಗೂ ಕಪಿಲ ಯುವಕ ಮಂಡಲದ ಕಾರ್ಯದರ್ಶಿಯಾದ ಕವಿನ್ ಕಾನತ್ತಿಲ, ಕೋಶಾಧಿಕಾರಿಯದ ನಿತೀಶ್ ಜಟ್ಟಿಪಳ್ಳ, ಉಪಾಧ್ಯಕ್ಷರಾದ ವಿಪಿನ್ ಕರ್ಕೇರ, ಹಾಗೂ ಜಟ್ಟಿಪಳ್ಳ ಶಾಖಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .ಈ ಕಾರ್ಯಕ್ರಮದಲ್ಲಿ ಚಿತ್ತಾರ ಬಂಟ್ವಾಳ ಇವರು ಬೌದ್ಧಿಕನ್ನು ನೀಡಿ ರಕ್ಷಾಬಂಧನದ ಮಹತ್ವ ಹಾಗೂ ಆಚರಣೆಯ ಬಗ್ಗೆ ತಿಳಿಸಿದರು.
