
ಜಾಲ್ಸೂರು ಗ್ರಾಮದ ಶೇಷನಡ್ಕ ಕೃಷ್ಣಪ್ಪ ನಾಯ್ಕ ಹಾಗೂ ಶ್ರೀಮತಿ ಪ್ರೇಮ ದಂಪತಿಯ ಪುತ್ರ ಕಿಶೋರ್ ಅಗ್ನಿವೀರ್ ತರಬೇತಿ ಪೂರ್ತಿಗೊಳಿಸಿ ಊರಿಗೆ ಆಗಮಿಸಿದ್ದು, ಅವರಿಗೆ ಜಾಲ್ಸೂರು ಗ್ರಾಮದ ಅಡ್ಕಾರು ವಿನೋಬನಗರದಲ್ಲಿರುವ ಗಿರಿಜನ ಮರಾಟಿ ಸೇವಾ ಮಂದಿರದ ವತಿಯಿಂದ ಆ. 27ರಂದು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶಿವಪ್ಪ ಕಜೆಗದ್ದೆ ಕಾರ್ಯದರ್ಶಿ ಭೋಜಪ್ಪ ನಾಯ್ಕ ವಿನೋಬನಗರ ಉಪಸ್ಥಿತರಿದ್ದರು. ದಾಮೋದರ ನಾಯ್ಕ ಮಹಾಬಲಡ್ಕ ಅವರು ಸ್ವಾಗತಿಸಿ, ಕು. ಅಶ್ವಿತಾ ಪ್ರಾರ್ಥಿಸಿದರು. ಸಂಘದ ಸದಸ್ಯರಾದ ಕೃಷ್ಣಪ್ಪ ನಾಯ್ಕ ಜಾಲ್ಸೂರು ಇವರು ಕಿಶೋರ್ ಕುಮಾರ್ ಅವರ ಪರಿಚಯವನ್ನು ಓದಿದರು. ಸಂಘದ ಎಲ್ಲಾ ಗಿರಿಜನ ಮರಾಟಿ ಬಾಂಧವರು ಸಭೆಯಲ್ಲಿ ಹಾಜರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

