
ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ ಪೆರಾಜೆ ಮಡಿಕೇರಿ ಇದರ ವಾರ್ಷಿಕ ಮಹಾಸಭೆಯು ಆ.27 ರಂದು ಶ್ರೀ ವಯಾನಾಟ್ ಕುಲವನ್ ದೈವಸ್ಥಾನ ಕುಂಬಳಚೇರಿ ಇದರ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಭುವನ್ ಕುಂಬಳಚೇರಿ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜೀವನ್ ಮಜಿಕೋಡಿ ವಾರ್ಷಿಕ ವರದಿ ವಾಚಿಸಿದರು. ಸಂಘದ ಖಜಾಂಜಿ ಪ್ರವೀಣ್ ಮಜಿಕೋಡಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಈಗ ಇರುವ ಆಡಳಿತ ಮಂಡಳಿಯನ್ನೇ ಪುನರ್ ಆಯ್ಕೆ ಮಾಡಲಾಯಿತು. ರಮೇಶ್ ಮಜಿಕೋಡಿ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಜೀವನ್ ಮಜಿಕೋಡಿ ಸ್ವಾಗತಿಸಿ,ಖಜಾಂಜಿ ಪ್ರವೀಣ್ ಮಜಿಕೋಡಿ ವಂದಿಸಿದರು.

