Ad Widget

ಕಲ್ಚಾರು : ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಮರ ತೆರವುಗೊಳಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

ಗುತ್ತಿಗಾರು ಗ್ರಾಮದ ಕಲ್ಚಾರು – ಕುಟ್ರುಮಕ್ಕಿ ಎಂಬಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರ, ಬಿದಿರು, ತೆಂಗಿನಗರಿ ಇತ್ಯಾದಿ ಕಸಕಡ್ಡಿಗಳನ್ನು ತೆರವುಗೊಳಿಸುವ ಬಗ್ಗೆ ಗ್ರಾಮ ಪಂಚಾಯತ್ ಕೋರಿಕೆ ಮೇರೆಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತಕ್ಷಣವೇ ಸ್ಪಂದಿಸಿ ಶ್ರಮದಾನದ ಮೂಲಕ ತೆರವುಗೊಳಿಸಿದರು.

. . . . . . . . .

ಸ್ಥಳೀಯರಾದ ಚಂದ್ರಕಾಂತ ಮೊಟ್ಟೆಯವರ ಸಹಕಾರದಿಂದ ಮೆಷಿನ್ ಮುಖಾಂತರ ಮರಗಳನ್ನು ಕತ್ತರಿಸಿ ತೆಗೆಯಲಾಯಿತು. ಘಟಕದ ಸಂಯೋಜಕರಾದ ಲೋಕೇಶ್ವರ ಡಿ. ಆರ್. ಸದಸ್ಯರುಗಳಾದ ಅಚ್ಚುತ ಗುತ್ತಿಗಾರು, ಮಾಧವ ಎರ್ದಡ್ಕ , ಸತೀಶ್ ಮೂಕಮಲೆ, ದೀಕ್ಷಿತ್ ಎನ್. ಎಲ್, ಹರಿಶ್ಚಂದ್ರ ಕಂದ್ರಪ್ಪಾಡಿ, ಜಯಪ್ರಕಾಶ್ ಬಾಕಿಲ, ಓಂಕಾರ ಡಿ.ಆರ್, ಮೋಹಿತ್ ಗುತ್ತಿಗಾರು ಭಾಗವಹಿಸಿದ್ದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading