
ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಕಳೆದ ವರ್ಷ ಸರಕಾರಿ ಆಂಬುಲೆನ್ಸ್ ಒಂದು ಅನಾರೋಗ್ಯ ವ್ಯಕ್ತಿ ಒಬ್ಬರನ್ನು ಸಾಗಿಸುವಾಗ ಗುತ್ತಿಗಾರು ಸಮೀಪದಲ್ಲಿ ತಾಂತ್ರಿಕ ತೊಂದರೆಯಿಂದ ಆಕ್ಸಿಜನ್ ಕೊರತೆ ಉಂಟಾದಾಗ ತಕ್ಷಣವೇ ಸೇವೆ ನೀಡಿ ಸಂಕಷ್ಟದಲ್ಲಿ ಇದ್ದ ಅನಾರೋಗ್ಯದ ವ್ಯಕ್ತಿಯನ್ನು ರಕ್ಷಣೆ ಮಾಡಿತ್ತು. ಈ ವಿಷಯ ಗಮನಿಸಿ ತಕ್ಷಣವೇ ಟ್ರಸ್ಟ್ ಅನ್ನು ಸಂಪರ್ಕಿಸಿದ ಆನಂದ ಗೌಡ ಈಶ್ವರಮಂಗಲ ಅವರು ಟ್ರಸ್ಟ್ ಗೆ ತನ್ನ ಕೊಡುಗೆಯಾಗಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದರು .ಇದೀಗ ಸುಳ್ಯಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್ ಹಸ್ತಾಂತರದೊಂದಿಗೆ ಸಹಾಯಧನ ನೀಡಿ ಗ್ರಾಮೀಣ ಪ್ರದೇಶದ ಆಂಬುಲೆನ್ಸ್ ಸೇವೆಗೆ ಶುಭಾಶಯಗಳು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ವನಿತಾ ಆನಂದ ಗೌಡ, ಸಾತ್ವಿಕ್ ಕನ್ನಡ್ಕ, ಪ್ರವೀಣ್ ಕಡೋಡಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.
