ಸುಳ್ಯ ಪುತ್ತೂರು ಹೆದ್ದಾರಿಯ ಬಳಿ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ದ್ವಾರದ ಬಳಿ ನಿಲ್ಲಿಸಿದ್ದ ನ್ಯಾಯವಾದಿಯೋರ್ವರ ಬೈಕ್ ನಿಂದ ಕಳ್ಳರು ಮಿರರ್ ಮತ್ತು ಇತರ ಸಾಮಾಗ್ರಿ ಎಗರಿಸಿದ ಘಟನೆ ವರದಿಯಾಗಿದೆ.
ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಸುಳ್ಯದ ನ್ಯಾಯವಾದಿಗಳಾದ ಚಂದ್ರಶೇಖರ ಉದ್ದಂತಡ್ಕ ಎಂಬುವವರು ಇಂದು ಬಂಟ್ವಾಳ ತಾಲೂಕಿನ ವಿಟ್ಲದ ವಾಣಿಯ ಗಾಣಿಗ ಸಮಾಜದ ಮಹಾಸಭೆಯಲ್ಲಿ ಭಾಗಿಯಾಗಲು ಮತ್ತು ಗಾಣಿಗ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಲು ಬೈಕ್ ಪಾರ್ಕಿಂಗ್ ಮಾಡಿ ತೆರಳಿದ್ದರು. ಆದರೆ ಅವರು ವಾಪಸ್ ಬಂದು ನೋಡಿದಾಗ ತನ್ನ ದ್ವಿಚಕ್ರ ವಾಹನದ ಮಿರರ್ , ಹೆಲ್ಮೆಟ್ , ಪೆಟ್ರೋಲ್ ಕಳವಾಗಿರುವ ವಿಚಾರ ತಿಳಿದುಬಂದಿದೆ. ತಾಲೂಕಿನ ನಾನಾ ಕಡೆಗಳಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದು ಪೋಲೀಸರ ಕಣ್ತಪ್ಪಿಸಿ ಕಳ್ಳರು ಕೈಚಳಕ ಮುಂದುವರೆಸಿದ್ದಾರೆ. ಪೋಲಿಸ್ ಇಲಾಖೆ ಕಳ್ಳರನ್ನು ಯಾವಾಗ ಹೆಡೆಮುರಿ ಕಟ್ಟುತ್ತಾರೆ ಎಂದು ಕಾದು ನೋಡಬೇಕಿದೆ.