Ad Widget

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿಗೀತೆ ರಸಮಂಜರಿ

ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನದ ಪ್ರಯುಕ್ತ ಗಾಯಕ ಎಚ್ಚ್. ಭೀಮರಾವ್ ವಾಷ್ಠರ್ ನೇತೃತ್ವದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮವು
2 ಗಂಟೆಗಳಿಗೂ ಹೆಚ್ಚು ಕಾಲ ನೆರವೇರಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ಬಿ ಕೆ ಉಮಾದೇವಿ ಉದ್ಘಾಟಿಸಿದರು.
ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕರಾದ ಪುಷ್ಪಾ ಆರ್ ಡಿ ಎಡಮಂಗಲ , ಪಲ್ಲವಿಶ್ರೀ ಆಲೆಟ್ಟಿ, ಮಾಸ್ಟರ್ ಚೆನ್ನಕೇಶವ, ಕೃಷ್ಣವೇಣಿ ಐವರ್ನಾಡು ಭಕ್ತಿಗೀತೆಗಳನ್ನು ಹಾಡಿದರು. ಈ ಕಾರ್ಯಕ್ರಮದ ಮಧ್ಯೆ ದಾವಣಗೆರೆಯ ಅಕ್ಕನವರಾದ ಬಿ ಕೆ ಲೀಲಾದೇವಿ ಅವರು ರಕ್ಷಾಬಂಧನದ ಬಗ್ಗೆ ಪ್ರವಚನ ನೀಡಿದರು . ಅಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಣೆಗೆ ಗಂಧ ಹಚ್ಚಿ ರಕ್ಷಾಬಂಧನ ಕಟ್ಟಿ ಸಿಹಿ ನೀಡಿ ಆಶೀರ್ವದಿಸಿದರು . ಕಾರ್ಯಕ ರ್ತರಾದ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಸ್ವಾಗತಿಸಿ ವಂದಿಸಿದರು .ಸಾಹಿತಿ ಜ್ಯೋತಿಷಿ ಸಂಘಟಕರಾದ ಭೀಮರಾವ್ ವಾಶ್ಟರ್ ಅವರು ಹಲವು ಭಕ್ತಿಗೀತೆಗಳನ್ನು ಹಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಾಜದ ಪದಾಧಿಕಾರಿಗಳು ಸದಸ್ಯರು ಮತ್ತು ಇನ್ನಿತರ ಸಂಘದ ಜನರು ಹಾಗೂ ಭಕ್ತರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading