ಸೆ.1 ರಂದು ಸುಳ್ಯ ರಾಘವೇಂದ್ರ ಮಠದಲ್ಲಿ 352 ನೇ ವರ್ಷದ ರಾಯರ ಆರಾಧನಾ ಮಹೋತ್ಸವಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 352 ನೇ ವರ್ಷದ ಆರಾಧನಾ ಮಹೋತ್ಸವವು ಸೆ.1 ರಂದು ನಡೆಯಲಿದೆ ಎಂದು ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಯವರು ಮಾತನಾಡಿ ಮಂಜಾನೆ ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆ ಕವಚ ಸಮರ್ಪಣೆ ಮಾಡಲಾಗುವುದುವೈದಿಕ ಕಾರ್ಯಕ್ರಮದಲ್ಲಿ ಗಣಪತಿ ಹವನ ,ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣಾರಾಧನೆಯಾಗಿ ಮಹಾಪೂಜೆ ನಡೆದು ಮಂತ್ರಾಕ್ಷತೆ ಯೊಂದಿಗೆ ಪ್ರಸಾದ ವಿತರಣೆ ನಂತರಬೆಳಗ್ಗೆ 11.00 ರಿಂದ ರಾಜೇಶ್ ಮೇನಾಲ ಇವರಿಂದ “ಮಾರುತಿ ಮಹಿಮೆ” ಎಂಬ ಹರಿಕಥಾ ಕಾಲಕ್ಷೇಪ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಅನ್ನ ಸಂತರ್ಪಣೆನಡೆಯಲಿದೆ.ಸಂಜೆ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಭಜನೆಯ ಬಳಿಕ ಪಲ್ಲಕ್ಕಿ ಸೇವೆ,ತೊಟ್ಟಿಲು ಸೇವೆ,ನೃತ್ಯ, ವೇಧಗಳನ್ನು ಒಳಗೊಂಡು ಅಷ್ಟಾವಧಾನ ಸೇವೆ ವಿಜೃಂಭಣೆಯಿಂದ ನಡೆಯಲಿದ್ದು ರಾತ್ರಿ ಮಹಾಪೂಜೆಯಾಗಿ ಬಳಿಕ ಪ್ರಸಾದ ವಿತರಣೆ ಅನ್ನ ಸಂತರ್ಪಣೆಯು ನಡೆಯಲಿರುವುದು ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಶಿವಳ್ಳಿ ಸಂಪನ್ನದ ಮಾಜಿ ಅಧ್ಯಕ್ಷ ಗಂಗಾಧರ ಮಟ್ಟಿ, ಅಧ್ಯಕ್ಷ ರಾಮ್ ಕುಮಾರ್ ಹೆಬ್ಬಾರ್, ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ ಉಪಸ್ಥಿತರಿದ್ದರು.
- Thursday
- November 21st, 2024