ಜಾಲ್ಸೂರು ಗ್ರಾಮದ ಶೇಷನಡ್ಕದ ಕೃಷ್ಣ ನಾಯ್ಕ ಹಾಗೂ ಶ್ರೀಮತಿ ಪ್ರೇಮ ದಂಪತಿಯ ಪುತ್ರ ಅಗ್ನಿವೀರ್ ತರಬೇತಿ ಪೂರ್ತಿಗೊಳಿಸಿ, ಊರಿಗೆ ಆಗಮಿಸಿರುವ ಕಿಶೋರ್ ಹಾಗೂ ಜಾಲ್ಸೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರಿಗೆ ಕದಿಕಡ್ಕ ಅಂಗನವಾಡಿ ಕೇಂದ್ರ ಹಾಗೂ ಅಂಗನವಾಡಿ ಬಾಲವಿಕಾಸ ಸಮಿತಿಯ ವತಿಯಿಂದ ಆ.25ರಂದು ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾ.ಪಂ.ನೂತನ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಅಧ್ಯಕ್ಷತೆ ವಹಿಸಿ, ಅಗ್ನಿವೀರ್ ಕಿಶೋರ್ ಅವರನ್ನು ಸನ್ಮಾನಿಸಿ, ಶುಭಹಾರೈಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಬು ಕೆ.ಎಂ., ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಉಷಾ ಎಂ. ಕದಿಕಡ್ಕ, ಕದಿಕಡ್ಕ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ವಾರಿಜ, ಕನಕಮಜಲು ಸಹಕಾರಿ ಸಂಘದ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಗೌಡ ಕಾಳಮನೆ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ವೇಳೆ ಅಂಗನವಾಡಿ ಪುಟಾಣಿಗಳು ರಾಷ್ಟ್ರಧ್ವಜ ನೀಡಿ ಅಗ್ನಿವೀರ ಕಿಶೋರ್ ಅವರನ್ನು ವೇದಿಕೆಗೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಕು. ತುಳಸಿ, ಪಯಸ್ವಿನಿ ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಎಚ್. ಖಾದರ್ , ಆಶಾ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಮರಸಂಕ, ,ನಾಗಪ್ಪ ಕೆ, ವಿನೋದ್, ಇಬ್ರಾಹಿಂ , ಮುಬಶೀರ್, ಅಬ್ಬಾಸ್, ಶ್ರೀಮತಿ ಸವಿತ ಪೆರುಮುಂಡ, ವಸಂತಿ ಕಾಳಮನೆ, ಅಂಗನವಾಡಿ ಮಕ್ಕಳಪೋಷಕರು, ಕಿಶೋರ್ ಮನೆಯವರು, ಕನಕಮಜಲು ಸಹಕಾರಿ ಸಂಘದ ಸಿಬ್ಬಂದಿ ಗಂಗಾಧರ ಅಡ್ಕಾರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಗಿರಿಜ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾರ್ಥಿಸಿದರು. ಕದಿಕಡ್ಕ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಸುಜಾತ ಬೇರ್ಪಡ್ಕ ಸ್ವಾಗತಿಸಿ, ಶ್ರೀಮತಿ ವಿಜಯ ಕಾಳಮನೆ ವಂದಿಸಿದರು. ಅಂಗನವಾಡಿ ಬಾಲವಿಕಾಸ ಸಮಿತಿಯ ಸದಸ್ಯ ಶೇಖರ ಕಾಳಮನೆ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಚಂದ್ರಯಾನ 3 ಯಶಸ್ವಿಗೆ ಸಹಕರಿಸಿದ ಇಸ್ರೋ ಸಂಸ್ಥೆ ಹಾಗೂ ಕಾರಣಕರ್ತರಾದ ಭಾರತದ ವಿಜ್ಞಾನಿಗಳಿಗೆ ರಾಷ್ಟ್ರಗೀತೆ ಹಾಡಿ ಅಭಿನಂದನೆ ಸಲ್ಲಿಸಲಾಯಿತು.