7ನೇ ವರ್ಷದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023 ನಲ್ಲಿ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ಬಹುಮಾನ ಪಡೆದ ವಿದ್ಯಾರ್ಥಿಗಳು.ಆಗಸ್ಟ್ 5ರಂದು ಆನ್ಲೈನ್ ಮುಕೇನ ನಡೆದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಹವಿಕ್ಷಾ. ಎಸ್. ಆರ್(ತೃತೀಯ ಸ್ಥಾನ), ಜಿಶಾ.ಕೆ.ಕೆ(ತೃತೀಯ ಸ್ಥಾನ), ರಮಿಕ್ಷ ಮೇನಾಜೆ(ಚತುರ್ಥ ಸ್ಥಾನ), ಖುಷಿ. ಕೆ. ಎಂ(ಪಂಚಮ ಸ್ಥಾನ), ನಿಹಾನಿ.ವಿ(ಪಂಚಮ ಸ್ಥಾನ) ಮತ್ತು ಭಾಗವಹಿಸಿದ ಹವ್ಯಾಸ್.ಕೆ.ಟಿ, ಹರ್ಷಿಣಿ.ಕೆ.ಟಿ, ಮನ್ವಿಸ್.ಕೆ.ಆರ್, ತನುಷ್.ಕೆ ಇವರುಗಳಿಗೆ ಸಮಾಧಾನಕರ ಬಹುಮಾನ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ, ನಿವೃತ್ತ ಸೈನಿಕರಾದ ಶ್ರೀಮತಿ ಅನಿತಾ ಮಹೇಶ್, ಮಹೇಶ್ ಕೊಪ್ಪತಡ್ಕ,ವಿನಯ್ ಮಾಡಬಾಕಿಲು, ಕೇಶವ ಕಡೋಡಿ, ರವೀಂದ್ರ ಕೋಡೊಂಬು, ಪ್ರಶಾಂತ್ ವಾಲ್ತಾಜೆ, ರೋಹಿತ್.ಯಸ್.ಪಿ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
- Thursday
- November 21st, 2024