
ಮಂಗಳೂರಿನ ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ವತಿಯಿಂದ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ ,ಸಾಹಿತಿ ಗಾಯಕ ಸಂಘಟಕ ಹಾಗೂ ಚಿತ್ರ ನಿರ್ದೇಶಕರಾದ ಎಚ್ ಭೀಮರಾವ್ ವಾಷ್ಠರ್ ರಿಗೆ ಅವರ ಹಲವಾರು ವರ್ಷಗಳಿಂದ ಮಾಡಿದಂತಹ ವಿವಿಧ ಸಾಧನೆಗಳನ್ನು ಪರಿಗಣಿಸಿ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಇದರ ಮುಖ್ಯಸ್ಥರಾದಂತಹ ಸತೀಶ್ ಮೆನನ್ ಅವರು ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹರೇಕಳ ಹಾಜಬ್ಬ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಲಕ್ಷ್ಮಣ್ , ನಿರೂಪಕ ಪ್ರಜ್ವಲ್ ಕಾಂತಾರಾ ಚಿತ್ರ ಖ್ಯಾತಿಯ ನವೀನ್ ಬೊಂದೆಲ್, ಸಮಾಜ ಸೇವಕ ಮಿತ್ರದೇವ ಮಡಪ್ಪಾಡಿ , ಖ್ಯಾತ ಹಾಸ್ಯ ಭಾಷಣ ಕಾರ್ತಿ ಕವಿತಾ ಸುಧೀಂದ್ರ , ಅನುಷಾ ಉಜಿರೆ ಇನ್ನಿತರ ನಟ ನಟಿ ಗಾಯಕರು ಉಪಸ್ಥಿತರಿದ್ದರು.
