ಸುಳ್ಯ ಲಯನ್ಸ್ ಕ್ಲಬ್,ಕರ್ನಾಟಕ ರಾಜ್ಯ ವೈಜಾನಿಕ ಸಂಶೋಧನ ಪರಿಷತ್ತು ಇದರ ಆಶ್ರಯದಲ್ಲಿ ದ.ಕ.ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಂಗಳೂರು ಇದರ ವತಿಯಿಂದ ವಿಪತ್ತು ನಿರ್ವಹಣೆಯ ಬಗ್ಗೆ ಕಾರ್ಯಾಗಾರ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ವೀರಪ್ಪ ಗೌಡ ಕಣ್ಕಲ್ ವಹಿಸಿದರು. ಕಾರ್ಯಕ್ರಮವನ್ನು ಮಂಗಳೂರು 10ನೇ ಬೆಟಾಲಿಯನ್ ಏನ್.ಡಿ.ಆರ್.ಎಫ್ ಅಜಯಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ವೈ.ಸಂ.ಪರಿಷತ್ ಜಿಲ್ಲಾ ಉಪಾಧ್ಯಕ್ಷ ಡಾ.ಅನುರಾಧಾ ಕುರುಂಜಿ ಸೇರಿದಂತೆ ಮುಂತಾದವರು ಭಾಗವಹಿಸಿದರು. ಕಾರ್ಯಕ್ರಮ ದಲ್ಲಿ ಸುಳ್ಯ ಆಶಾ ಕಾರ್ಯಕರ್ತರು, ಸುಳ್ಯ ಅಂಗನವಾಡಿ ಕಾರ್ಯಕರ್ತರು, ಸುಳ್ಯ ತಾಲ್ಲೂಕು ಆಟೋ ಚಾಲಕ ಸಂಘ, ಎಸ್.ಕೆ.ಎಸ್.ಎಸ್.ಎಫ್.ವಿಖಾಯ ಸುಳ್ಯ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್, ಅಂಬ್ಯುಲೆನ್ಸ್ ಚಾಲಕರು, ಎಸ್.ಎಸ್.ಎಫ್ ಇಸಾಬ ಸುಳ್ಯ, ಕಾರ್ಯಕರ್ತರು ಭಾಗವಹಿಸಿದರು. ರಮೇಶ್ ಶೆಟ್ಟಿ ಪ್ರಾರ್ಥಸಿದರು. ರಾಮಚಂದ್ರ ಪೆಲ್ತಡ್ಕ ಸ್ವಾಗತಿಸಿ, ದೊಡ್ಡಣ್ಣ ಬರಮೇಲು ವಂದಿಸಿದರು.
- Friday
- November 1st, 2024