Ad Widget

ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಭಯ ಹುಟ್ಟಿಸಿ ಜನರನ್ನು ಮರಳು ಮಾಡುವುದು ಬಿಜೆಪಿಯ ಚುನಾವಣಾ ಗಿಮಿಕ್ : ಎಂ ವೆಂಕಪ್ಪ ಗೌಡ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವದ ಚಂದ್ರಯಾನ-1 ಯಶಸ್ವಿಯಾಗಿರುವುದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ 3 ಮಿಷನ್ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿರುವುದು ಜಗತ್ತಿನ ರಾಷ್ಟ್ರಗಳಲ್ಲೇ ಪ್ರಥಮ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರ ದೂರದೃಷ್ಠಿಯಿಂದ ಸ್ಥಾಪಿತವಾದ ಇಸ್ರೋ ಮಹತ್ವದ ಮೈಲುಗಲ್ಲು ನೆಟ್ಟಿದೆ. 1969 ಆಗಸ್ಟ್ 15ರಂದು ಸ್ಥಾಪಿತವಾಗಿ ಚಂದ್ರನ ನೆಲದಲ್ಲಿ ಅತ್ಯಂತ ಯಶಸ್ವಿಯಾಗಿ ಹೆಜ್ಜೆಯಿಟ್ಟ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಇಂದು ಇತಿಹಾಸ ನಿರ್ಮಿಸಿದೆ. ಈ ಯಶಸ್ಸಿನ ಹಿಂದೆ ದುಡಿದಿರುವ ನಮ್ಮ ದೇಶದ ಹೆಮ್ಮೆಯ ಎಲ್ಲಾ ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ಮತ್ತು ಪತ್ಯಕ್ಷವಾಗಿ, ಪರೋಕ್ಷವಾಗಿ ಹಗಲು ರಾತ್ರಿಯೆನ್ನದೆ ಕಳೆದೊಂದು ವರ್ಷದಿಂದ ನಿರಂತರ ಕಾರ್ಯ ನಿರ್ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಇಸ್ರೋದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಸುಳ್ಯದ ತಂತ್ರಜ್ಞರಿಗೂ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

. . . . . . .

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಬಿಜೆಪಿಯವರಿಂದ ಜನರನ್ನು ಮರುಳು ಮಾಡುವ ಗಿಮಿಕ್, ಕಸ್ತೂರಿ ರಂಗನ್ ವರದಿಯ ಜಾರಿ ಮಾಡಲಾಗುತ್ತದೆ. ಎಂದು ಬಿಜೆಪಿಯವರು ಗುಲ್ಲೆಬ್ಬಿಸುತ್ತಿದ್ದಾರೆ. ಇದನ್ನು ನಿಲ್ಲಿಸುವುದು ಅಥವಾ ಜಾರಿಗೊಳಿಸಲು ಬಿಜೆಪಿಗೆ 1 ನಿಮಿಷ ಸಾಕು. ಏಕೆಂದರೆ ಅದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಏನೂ ಮಾಡಲು ಸಾಧ್ಯವಿಲ್ಲ. ಈ ಹಿಂದೆ ರಮಾನಾಥ ರೈ ಯವರು ಅರಣ್ಯ ಸಚಿವರಾಗಿದ್ದ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೇಸ್ ಸರಕಾರ ಈ ವರದಿಯನ್ನು ಜಾರಿಗೊಳಿಸದಂತೆ ವಿರೋಧ ವ್ಯಕ್ತಪಡಿಸಿತ್ತು. ಮತ್ತು ಅದರ ನಂತರದ ಸರ್ಕಾರ ಸಹ ಈ ಬಗ್ಗೆ ಯಥಾವತ್ತಾಗಿ ವಿರೋಧ ಸಲ್ಲಿಸುತ್ತಲೇ ಬಂದಿದೆ. ಈಗ ನಮ್ಮ ರಾಜ್ಯ ಸರ್ಕಾರ ಸಹ ಈ ವರದಿಯನ್ನು ಜಾರಿ ಮಾಡಲು ಒಪ್ಪುವುದೂ ಇಲ್ಲ. ಮಾಡಲು ಬಿಡುವುದೂ ಇಲ್ಲ. ಇದು ಜಾರಿಯಾಗುತ್ತದೆ ಎಂದು ಬಿಜೆಪಿಯವರು ಚುನಾವಣೆಯ ದೃಷ್ಟಿಯಿಂದ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮಾಡುತ್ತಿರುವ ಗಿಮಿಕ್ ಆಗಿದೆ ಎಂದು ಕಿಡಿ ಕಾರಿದರು.
ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000/-ಗಳನ್ನು ನೀಡುವ ‘ಗೃಹಲಕ್ಷ್ಮಿ ಯೋಜನೆ” ಯನ್ನು ಜಾರಿಗೆ ತರಲು ಸರ್ಕಾರವು ಉದ್ದೇಶಿಸಿ, ಸರ್ಕಾರ ಆದೇಶ ಸಂ: ಮಮಇ 70 ಮಮತಿ 2023 ದಿನಾಂಕ 06-06-2023 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ. ಅದರಂತೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನ’ ಎಂದು ನಮೂದಿಸಿರುವ ಮಹಿಳೆಯು ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ. ಈ ಯೋಜನೆಗೆ ನೋಂದಣಿಯನ್ನು ದಿನಾಂಕ 19.07.2023 ರಿಂದ ಚಾಲನೆ ನೀಡಲಾಗಿರುತ್ತದೆ. ರಾಜ್ಯದಲ್ಲಿ ಸುಮಾರು 110 ಕೋಟಿ ಜನರು ನೋಂದಾಯಿಸಿದ್ದಾರೆ ಎಂದು ವಿವರ ನೀಡಿದರು.

ಸುಳ್ಯ ನಗರದಲ್ಲಿ ಒಟ್ಟು 3717 ಪಡಿತರಚೀಟಿಯಲ್ಲಿ 2699 ಮಂದಿ ನೋಂದಾಯಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಟ್ಟು 23,918 ಪಡಿತರ ಚೀಟಿದಾರರಲ್ಲಿ 18,890 ಮಂದಿ ನೋಂದಾಯಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಒಟ್ಟು 21,589 ಮಂದಿ ನೋಂದಾಯಿಸಿದ್ದಾರೆ. 6,146 ಮಂದಿ ಬಾಕಿ ಇದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ
ದಿನಾಂಕ 30.08.2023ರಂದು ಸೌಲಭ್ಯವನ್ನು ಎಲ್ಲಾ
ಪಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಮೈಸೂರಿನಲ್ಲಿ ವಿನೂತನ
ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಪಲಾನುಭವಿಗಳು ಏಕ ಕಾಲದಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಪಲಾನುಭವಿಗಳಿಗೆ ಅವರವರ ಖಾತೆಗೆ ನಗದು ವರ್ಗಾವಣೆ ಆಗಿರುವ ಬಗ್ಗೆ ಏಕ ಕಾಲದಲ್ಲಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲು ವ್ಯವಸ್ಥೆ ಮಾಡಲಾಗಿದೆ.ಕಾರ್ಯಕ್ರಮದ ರೂಪುರೇಷೆ ಮೈಸೂರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಕಾರ್ಯಕ್ರಮದ ಸ್ಥಳದಲ್ಲಿ ಒಂದು ಟಿ.ವಿ ಹಾಗೂ ಒಂದು ಎಲ್ ಇಡಿ ಪರದೆ ವ್ಯವಸ್ಥೆ ಮಾಡಬೇಕು. ಟಿ.ಎ ಪರದೆಯಲ್ಲಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶಿಸಬೇಕು ಹಾಗೂ ಎಲ್ ಇ ಡಿ ಪರದೆಯಲ್ಲಿ ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಇದರ ಲಿಂಕ್ ಕಾರ್ಯಕ್ರಮದ ಮುಂಚಿತವಾಗಿ ತಿಳಿಸುತ್ತಾರೆ ಎಂದು ಹೇಳಿದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಇಲ್ಲಿ ಇರುವವರು ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಹಾಗೂ ಉಚ್ಚಾಟನೆ ವಿಚಾರದಲ್ಲಿ ರಾಜ್ಯಾಧ್ಯಕ್ಷರಾದ ಡಿಕೆಶಿಯವರು ಈಗಾಗಲೇ ನಮ್ಮ ಮನವಿ ಪತ್ರದಲ್ಲೆ ಅದನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ಬ್ಲಾಕ್ ಅಧ್ಯಕ್ಷರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ ಎಂದು ಸ್ಪಷ್ಟ ಪಡಿಸಿದರು .
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ವಿಪಕ್ಷ ನಾಯಕರಾದ ಬಾಲಕೃಷ್ಣ ಭಟ್ , ಭವಾನಿಶಂಕರ್ , ಸತ್ಯಕುಮಾರ್ ಆಡಿಂಜ , ಶಶಿಧರ ಎಂ ಜೆ , ಕೆ .ಗೋಕುಲ್ ದಾಸ್ , ಧೀರಾಕ್ರಾಸ್ತ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!