ಭಾರತದ ಹೆಸರನ್ನು ವಿಶ್ವಗುರುವಾಗಿಸಿದ ಇಸ್ರೋ ಸಾಧನೆಗೆ ವಿಶ್ವವೇ ನಿಬ್ಬೆರಗಾಗಿದೆ. ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ. ವಿಜ್ಞಾನಿಗಳಿಗೆ ಎಲ್ಲೆಡೆ ಅಭಿನಂದನೆ, ಹಾರೈಕೆಗಳೇ ಮುಗಿಲೆತ್ತರಕ್ಕೆ ಮಟ್ಟಿದೆ.
ಇಸ್ರೋ ತಂಡದಲ್ಲಿ ಸುಳ್ಯದ ಮೂವರು ಸಾಧಕರಿರುವುದು ಸುಳ್ಯಕ್ಕೆ ಹೆಮ್ನೆಯ ಸಂಗಾತಿಯಾಗಿದೆ. ಮಂಡೆಕೋಲಿನ ಮಾನಸಾ, ಕೊಡಪಾಲದ ಶಂಭಯ್ಯ ಹಾಗೂ ಉಬರಡ್ಕದ ವೇಣುಗೋಪಾಲ್ ಭಟ್ ಇಸ್ರೋ ತಂಡದಲ್ಲಿದ್ದು ಚಂದ್ರಯಾನ 3 ಯಶಸ್ವಿಗೆ ತಮ್ಮ ಅಳಿಲ ಸೇವೆ ಸಲ್ಲಿಸಿದ್ದಾರೆ.
ವೇಣುಗೋಪಾಲ ಭಟ್ ಉಬರಡ್ಕ
ಉಬರಡ್ಕ ಗ್ರಾಮದ ಅನಂತೇಶ್ವರ ಭಟ್ ಹಾಗೂ ಸಾವಿತ್ರಿ ದಂಪತಿಗಳ ಪುತ್ರರಾಗಿರುವ ಇವರು ಪ್ರಸ್ತುತ ಬೆಂಗಳೂರಿನ ವಿದ್ಯಾರಣ್ಯಪುರಂ ನಲ್ಲಿ ನೆಲೆಸಿದ್ದು ಇಸ್ರೋ ಸಂಸ್ಥೆಯ ಪಿಸಿಬಿ ಡಿಸೈನಿಂಗ್ ಟೀಮ್ ನಲ್ಲಿ ವಿಜ್ಞಾನಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಸುಳ್ಯದಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡಿ ಇಸ್ರೋ ಸಂಸ್ಥೆಗೆ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ಉದ್ಯೋಗಕ್ಕೆ ಸೇರಿಕೊಂಡು ಸಾಧನೆಯ ಮೆಟ್ಟಿಲು ಹತ್ತಿದರು. ಅಲ್ಲಿಂದಲೇ ಇಂಜಿನಿಯರಿಂಗ್ ವ್ಯಾಸಂಗ ಮಾಡಿ BE, ME ಪದವಿ ಪಡೆದು ಸೈಂಟಿಸ್ಟ್ E ಗ್ರೇಡ್ ಪದೋನ್ನತಿ ಪಡೆದುಕೊಂಡರು. ಈ ಚಂದ್ರಯಾನ 3 ಯೋಜನೆಯ ಪಿಸಿಬಿ ಡಿಸೈನಿಂಗ್ ತಂಡದ ಸೇವೆ ಸಲ್ಲಿಸಿ,ಚಂದ್ರಯಾನ ಯಶಸ್ವಿಗೊಳ್ಳಲು ಶ್ರಮಿಸುವ ಮೂಲಕ ದೇಶ ,ಸಂಸ್ಥೆ ಹಾಗೂ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.
ಇವರ ಪತ್ನಿ ಶರ್ಮಿಳಾ ಗೃಹಿಣಿಯಾಗಿದ್ದು, ಪುತ್ರಿ ವಿಂಧ್ಯಾ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರ ಶಿಶಿರ್