ಗುತ್ತಿಗಾರು ಸಮೀಪದ ಹಾಲೆಮಜಲು ಎಂಬಲ್ಲಿ ಬೆಳಿಗ್ಗೆ 7:30ರ ಸುಮಾರಿಗೆ ವೃದ್ಧ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದು, ಇದನ್ನು ಗಮನಿಸಿದ ವಿನ್ಯಾಸ್ ಕೊಚ್ಚಿ ಎಂಬುವವರು ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಮರಸೇನಾ ಅಂಬುಲೆನ್ಸ್ ಗೆ ತಿಳಿಸಿದ್ದು, ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಗಾಯಾಳು ವ್ಯಕ್ತಿಗೆ ಡಾ| ಕಾಮತ್ ಅವರಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಅಂಬುಲೆನ್ಸ್ ಮೂಲಕ ಅವರನ್ನು ಅವರ ಮನೆಗೆ ತಲುಪಿಸಲಾಯಿತು.
ಈ ಸಂದರ್ಭದಲ್ಲಿ ಚೇತರಿಸಿಕೊಂಡ ಗಾಯಾಳು ವ್ಯಕ್ತಿ ಅಂಬುಲೆನ್ಸ್ ಸೇವೆಗೆ ಸಹಾಯಧನ ನೀಡಿ ಮಾದರಿಯಾದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಮಾಧವ ಎರ್ಧಡ್ಕ, ರಾಜೇಶ್ ಉತ್ರಂಬೆ, ರಾಜೇಶ್ ಕುಕ್ಕುಜೆ, ಗಿರೀಶ್ ಕಾಯರಮೊಗೆರ್, ತೇಜಾವತಿ ಇವರುಗಳು ಸಹಕರಿಸಿದರು.ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚಂದ್ರಶೇಖರ ಕಡೋಡಿ ಹಾಗೂ ವಿನಯ್ ಮಾಡಬಾಕಿಲು ಗಾಯಾಳು ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.
(ವರದಿ : ಉಲ್ಲಾಸ್ ಕಜ್ಜೋಡಿ)