- Thursday
- November 21st, 2024
ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಆ.22 ರಂದು ಬೆಳಿಗ್ಗೆ 11 ಗಂಟೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದ್ದು, ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸದೇ ಯಥಾವತ್ತಾಗಿ ಮತ್ತು ಕರ್ನಾಟಕ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮಕೈಗೊಳ್ಳುತ್ತಿದ್ದು, ಇದನ್ನು ವಿರೋಧಿಸಿ ಈ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಸಮಾನ ಮನಸ್ಕರು,...
ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಮಹಾಸಭೆಯು ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಲೆಕ್ಕಪತ್ರ ಮಂಡನೆ ಸೇರಿದಂತೆ ೨೦೨೩ರಲ್ಲಿ ನಡೆಯುವ ೧೯ನೇ ವರ್ಷದ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿನ್ಯಾಸ್ ಹೊಸೋಳಿಕೆ ನೇಮಕಗೊಂಡರು....
ಕೆ.ಎಸ್.ಟಿ.ಸಿ ಮೆಕ್ಯಾನಿಕಲ್ ಹರೀಶ್ ಕುದ್ಪಾಜೆ ಅವರು 2022 ನೇ ಸಾಲಿನಲ್ಲಿ ಕೆ.ಎಸ್.ಆರ್.ಟಿ.ಸಿ ನಿಗಮದಿಂದ ನೀಡಲಾಗುವ ಉತ್ತಮ ಪ್ರಶಂಸನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪುರಸ್ಕಾರವನ್ನು ಪುತ್ತೂರು ಘಟಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಲಾಯಿತು. ಇವರು ಪುತ್ತೂರು ಘಟಕದ ಸುಳ್ಯ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಬರಡ್ಕ ಗ್ರಾಮದ ಕುದ್ಪಾಜೆಯವರು. ಇವರ ಪತ್ನಿ ಪಲ್ಲವಿ ಸುಳ್ಯ ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದಾರೆ.
ಸುಬ್ರಹ್ಮಣ್ಯ: ಪ್ರತಿಷ್ಠಿತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಇದರ 53ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಸಂಪ್ಯಾಡಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿನ್ಯಾಸ್ ಹೊಸೋಳಿಕೆ, ನಿತೀನ್ ಭಟ್, ಸುಹಾಸ್ ಎಚ್.ಎಲ್, ಗುರುಪ್ರಸಾದ್ ಆದಿ ನೇಮಕಗೊಂಡರು. ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್ ಮತ್ತು ರಾಜೇಶ್ ಎನ್.ಎಸ್ ಸಂಚಾಲಕರಾಗಿ ಆಯ್ಕೆಯಾದರು. 52ನೇ ವರ್ಷದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಅಧ್ಯಕ್ಷತೆಯಲ್ಲಿ ನಡೆದ...
ಅಂಬೇಡ್ಕರ್ ರಕ್ಷಣಾ ವೇದಿಕೆಯ ಗುತ್ತಿಗಾರು ಘಟಕದ ಉದ್ಘಾಟನೆ ಆ.20 ರಂದು ಗುತ್ತಿಗಾರು ಗ್ರಾಮದ ಚತ್ರಪ್ಪಾಡಿ ಬಾಲಕೃಷ್ಣರವರ ಮನೆಯ ವಠಾರದಲ್ಲಿ ನಡೆಯಿತು. ಗಂಗಾಧರ ಚತ್ರಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂಘಟನೆಯ ಬಗ್ಗೆ ಮಾತನಾಡಿದರು. ಸುಳ್ಯ ತಾಲೂಕು ಅಧ್ಯಕ್ಷರಾದ ರಮೇಶ...
ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಡಾ.ಕುಲದೀಪ್ಎಂ.ಡಿ.ಯವರು ನೇಮಕಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮೋದನೆಯ ಮೇರೆಗೆ ತೆರವಿರುವ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ ಹುದ್ದೆಗೆ ಇವರನ್ನು ನೇಮಿಸಲಾಗಿದೆ. ಪ್ರಸ್ತುತ ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಯಾಗಿರುವುದಾಗಿ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ನಂದಕುಮಾರ್ ತಿಳಿಸಿದ್ದಾರೆ. ಡಾ.ಕುಲದೀಪ್ ಇವರು ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ದುಗಲಡ್ಕ...
✍️ ಭಾಸ್ಕರ ಜೋಗಿಬೆಟ್ಟು ತುಳುನಾಡಿನ ನಾಗರಾಧನೆಗೂ ಬೇರೆ ಪ್ರದೇಶಗಳಲ್ಲಿ ಆಚರಿಸುವ ನಾಗರಾಧನೆಗೂ ಅಜಗಜಾಂತರ ವ್ಯತ್ಯಾಸ ಇದೆ. ಇಲ್ಲಿ ಭೂಮಿಯ ಒಡೆಯ ದೈವ ನಾಗ ಬೆರ್ಮರ ಆರಾಧನೆ ನಡೆಯುತ್ತದೆ. ನಮ್ಮ ತುಳುನಾಡಿನಲ್ಲಿ ಪುರಾತನ ಕಾಲದಿಂದಲೂ ಇಲ್ಲಿನ ಆದಿ ಜನಾಂಗದವರು ಭಯ ಭಕ್ತಿಯಿಂದ ನಾಗನನ್ನು ದೈವಗಳ ರೂಪದಲ್ಲಿ ಆರಾಧಿಸಿಕೊಂಡು ಬಂದರು. ದೈವಗಳನ್ನು , ನಾಗನನ್ನು ಚಾವಡಿ, ಗುಡಿಗಳಲ್ಲಿ ಆರಾಧಿಸದೆ...
ಸುಳ್ಯದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ, ಭಾರತ ರತ್ನ ದಿ. ರಾಜೀವ್ ಗಾಂಧಿಯವರ 89ನೇ ಹಾಗೂ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಹರಿಕಾರ ದಿ. ದೇವರಾಜ ಅರಸು ರವರ 108ನೇ ಜನ್ಮದಿನಾಚರಣೆಯನ್ನು ಸುಳ್ಯ ನಗರದ ಕಾಂಗ್ರೆಸ್ ಕಾರ್ಯಕರ್ತರು ಸುಳ್ಯ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಆಚರಿಸಿದರು. ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿಸಿ ಜಯರಾಮ್...