ಸುಳ್ಯದ ವಿವೇಕಾನಂದ ವೃತ್ತದಿಂದ ಮಂಡೆಕೋಲು ಕಡೆಗೆ ತೆರಳುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಮಳೆನೀರು ಹರಿಯುತ್ತಿದೆ. ನಗರ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ರಸ್ತೆಯಲ್ಲಿ ಚರಂಡಿ ನಿರ್ಮಿಸದೇ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಒಂದು ಚಿಕ್ಕ ಮಳೆ ಬಂದಾಗ ಎಲ್ಲಾ ನೀರು ರಸ್ತೆಯಲ್ಲಿ ಹರಿದು ವಿದ್ಯಾರ್ಥಿಗಳಿಗೆ ಪಾದಚಾರಿಗಳಿಗೆ , ದ್ವಿಚಕ್ರ ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆ ಉಂಟುಮಾಡುತ್ತಿದೆ. ರಿಕ್ಷಾ,ಜೀಪು,ಕಾರು ಹಾಗೂ ಇನ್ನೀತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವಾಗ ನಡೆದುಕೊಂಡು ಹೋಗು ನಮ್ಮ ಮೇಲೆ ಕೆಸರೆಲ್ಲಾ ಚೆಲ್ಲುತ್ತಿದೆ.
ಈ ಸಮಸ್ಯೆಯನ್ನು ಯಾರಲ್ಲಿ ಹೇಳಬೇಕು ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದೂರುತ್ತಿದ್ದಾರೆ . ಇನ್ನಾದರೂ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.