ಕಳೆದೆರಡು ದಿನಗಳ ಹಿಂದೆ ಕಾಟಿಪಳ್ಳದ ಸಾವಿತ್ರಿ ವಿಷ್ಣುನಗರ ಮರಣ ಹೊಂದಿದಾಗ ಅವರ ಸಂಸ್ಕಾರದ ಸಂದರ್ಭದಲ್ಲಿ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಹರಿಶ್ಚಂದ್ರ ಘಾಟ್ ಇರುವ ಕಾರಣವಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಚಿಂತಿಸಿದಾಗ ಇದನ್ನು ತಿಳಿದ ಸ್ಥಳೀಯ ನಾಯಕರು ಜಾತಿ ಹಾಗೂ ಸಂಪ್ರದಾಯ ಪ್ರಕಾರವೇ ಮಾಡಬೇಕು ಎಂದು ತಿಳಿಸಿ ಸಾವಿತ್ರಿರವರ ಅಂತಿಮ ಯಾತ್ರೆಯಲ್ಲಿ ಸುಭೋದ್ ಶೆಟ್ಟಿ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ನಯನ ಕುಮಾರ್ ರೈ ಮೇನಾಲ, ಕಿರಣ್ ರೈ ಬಾಡೇಲು, ಕಮಲಾಕ್ಷ ರೈ ಬಾಡೇಲು, ಮುರಳೀಧರ ರೈ, ನಾಗೇಶ್ ಶೆಟ್ಟಿ ಮೇನಾಲ ಹಾಗೂ ಬಾಲಕೃಷ್ಣ ಪಲ್ಲತಡ್ಕ ಇವರು ಅಶಕ್ತ ಕುಟುಂಬಕ್ಕೆ , ಸಮುದಾಯದ ಜೊತೆ ಹೆಗಲುಕೊಟ್ಟು ಸುಮಾರು ಒಂದು ಕಿಲೋಮೀಟರ್ ಸಾಗಿದ್ದು ಇದೀಗ ಇವರ ಈ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
- Thursday
- November 21st, 2024