ಸ ಕಿ ಪ್ರಾ ಶಾಲೆ ನೇಲ್ಯಡ್ಕ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯaನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶಾಲಾ ಮಕ್ಕಳು ಭಾರತೀಯ ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ ಎಂದು ಹಾಡಿ ಕುಣಿದು ಘೋಷಣೆ ಕೂಗಿದರು . ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಕೆ ರಘುನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವಜಾರೋಹಣ ಗೈದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಊರಿನ ಶಿಕ್ಷಣ ತಜ್ಞ ರಾದ ಉದಯ ಅಮ್ಮಣಾಯ ಇವರು ಮಾತನಾಡಿ ಮಕ್ಕಳು ಸಂಸ್ಕಾರಯುತರಾಗಿ ಬಾಳಬೇಕು, ಮುಂದಿನ ದಿವಸಗಳಲ್ಲಿ ಭಾರತ ವಿಶ್ವದ ಮೂರು ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದು ರಾಷ್ಟ್ರ ಆಗಬೇಕು ಎಂದರು.ದುರ್ಗಾ ಸೇವಾ ಸಂಘ ಇದರ ಪದಾಧಿಕಾರಿಗಳಾದ ಯುವರಾಜ ಕಣ್ಕಲ್ ರವರು ಮಾತನಾಡಿ ಸ್ವಾತಂತ್ರ್ಯ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿದಾಗ ಶಾಶ್ವತವಾಗಿ ಮಕ್ಕಳಲ್ಲಿ ನೆನಪು ಉಳಿಯುತ್ತದೆ. ಮುಂದಿನ ಪೀಳಿಗೆಗೆ ಸಂಸ್ಕೃತಿ ವರ್ಗಾಯಿಸಿದಂತೆ ಆಗುತ್ತದೆ. ಮಕ್ಕಳು ದೇಶ ಕಟ್ಟುವ ಮುಂದಿನ ಭವ್ಯ ಪ್ರಜೆಗಳು, ಇವರ ಮೂಲಕ ನಮ್ಮ ದೇಶದಲ್ಲಿ ಸಂಸ್ಕಾರ ಜಾಗೃತವಾಗಲಿ ಎಂದು ನುಡಿದರು. ಮುಖ್ಯ ಅತಿಥಿ ಮಾಯಿಲಪ್ಪ ಗೌಡ ಕೆರೆಕ್ಕೋಡಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವ ಕಣ್ಕಲ್ ಮತ್ತು ಪಾರ್ವತಿ ನಾಯ್ಕ್, ಎಸ್. ಡಿ.ಎಂ.ಸಿ ಉಪಾಧ್ಯಕ್ಷರಾದ ಶೇಖರ ಕಣ್ಕಲ್ , ಮಕ್ಕಳ ಪೋಷಕರು , ಹಳೆ ವಿದ್ಯಾರ್ಥಿಗಳು , ಸ್ಥಳೀಯರು ಭಾಗವಹಿಸಿದ್ದರು. ಶಾಲಾ ಮುಖ್ಯ ಗುರು ಪುರುಷೋತ್ತಮ ಬಿ ಸ್ವಾಗತಿಸಿ, ಸಹ ಶಿಕ್ಷಕಿ ಅಶ್ವಿತಾ ವಂದಿಸಿದರು .ಹಿರಿಯ ವಿದ್ಯಾರ್ಥಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.