ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಶಾಲೆಯು ಶಿಥೀಲ ವ್ಯವಸ್ಥೆಯಲ್ಲಿದ್ದು ಈ ಹಿಂದಿನಿಂದಲೂ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು ಈ ಹಿನ್ನಲೆಯಲ್ಲಿ ಇಂದು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಹಾಗೂ ಇಲಾಖಾ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ಸ್ಪೀಕರ್ ಗಮನಕ್ಕೆ ತಂದು ತಕ್ಷಣವೇ ಟೆಂಡರ್ ಪ್ರಕ್ರಿಯೆ ನಡೆಸಲು ಕೇಳಿಕೊಳ್ಳುವುದಾಗಿ ಹೇಳಿದರು. ದೊಡ್ಡೇರಿ ಶಾಲೆಗೆ ಸುಮಾರು 2.81 ಎಕ್ರೆ ಜಮೀನು ಸ್ವಂತ ಜಮೀನು ಹೊಂದಿದ್ದು ಇದೀಗ ಮಕ್ಕಳು ನೆಲದಲ್ಲಿ ಪಾಠಪಠ್ಯಗಳನ್ನು ಆಲಿಸುತ್ತಿದ್ದು ಮಕ್ಕಳು ನೆಲದಲ್ಲಿ ಕುಳಿತುಕೊಂಡಿರುವುದನ್ನು ಗಮನಿಸಿದ ಶಾಸಕಿ ಶಿಕ್ಷಣ ಅಧಿಕಾರಿಗಳಿಗೆ ತಕ್ಷಣವೇ ಮಕ್ಕಳಿಗೆ ಮ್ಯಾಟ್ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದರು. ಅಲ್ಲದೇ ಮಕ್ಕಳಿಗೆ ಬದಲಿ ವ್ಯವಸ್ಥೆಯನ್ನು ಸ್ತ್ರೀ ಶಕ್ತಿ ಭವನದಲ್ಲಿ ಮಾಡುವಂತೆ ಅಲ್ಲಿನ ಜನತೆ ಒಕ್ಕೊರಳಿನಿಂದ ಕೇಳಿಕೊಂಡ ಮೇರೆಗೆ ಇದಕ್ಕೆ ಸಮ್ಮತಿಸಿದ ಶಿಕ್ಷಣ ಇಲಾಖೆ ಅಲ್ಲೆ ತರಗತಿ ಮತ್ತು ಓರ್ವ ಶಿಕ್ಷಕರನ್ನು ಇಲ್ಲಿಗೆ ಡೆಪ್ಟೇಶನ್ ಮೂಲಕ ನೀಡುವುದಾಗಿ ಭರವಸೆ ನೀಡಿದರು. ಶಾಸಕಿ ಹೆಚ್ಚುವರಿಯಾಗಿ ತಾಲೂಕು ಪಂಚಾಯತ್ ಅನುದಾನದಲ್ಲಿ 2 ಲಕ್ಷವನ್ನು ನೀಡುವುದಾಗಿ ಹೇಳಿದರು. ಇದೀಗ 7 ಲಕ್ಷ ಅನುದಾನ ಮಂಜುರಾಗಿದ್ದು ಇದನ್ನು ಸೇರಿಸಿದರೆ ಒಟ್ಟು 9 ಲಕ್ಷ ಅನುದಾನವಾಗುತ್ತದೆ ಎಂದು ಅಲ್ಲದೇ ಈ ಕಾಮಗಾರಿಯನ್ನು ಕೂಡಲೇ ಮಾಡಿಸುವುದಾಗಿ ಹೇಳಿದರು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ರೇವತಿರಾಧಕೃಷ್ಣ , ಪ್ರಮುಖರಾದ ಮಹೇಶ್ ಕುಮಾರ್ ಮೇನಾಲ , ಪ್ರಬೋದ್ ಶೆಟ್ಟಿ ಮೇನಾಲ , ಶಿಕ್ಷಣಾಧಿಕಾರಿ ರಮೇಶ್ ,ಜಿಲ್ಲಾ ಪಂಚಾಯತ್ ಎಂಜಿನಿಯರ್ ಮಣಿಕಂಠ ,ವಾಸುದೇವ ನಾಯ್ಕ್ ದೊಡ್ಡೇರಿ , ಎಸ್ ಡಿ ಎಂಸಿ ಅಧ್ಯಕ್ಷರಾದ ದಯಾನಂದ, ಉಪಾಧ್ಯಕ್ಷರಾದ ನಾಗವೇಣಿ , ಪೋಷಕರು, ಊರ ನಾಗರಿಕರು ಇತರರು ಉಪಸ್ಥಿತರಿದ್ದರು.
- Thursday
- November 21st, 2024