Ad Widget

ಸುನ್ನೀ ಸೆಂಟರ್ ಕಲ್ಲುಗುಂಡಿ ಸ್ವಾತಂತ್ರ್ಯೋತ್ಸವದಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ಡಾ. ಉಮ್ಮರ್ ಬೀಜದಕಟ್ಟೆ

ಕರ್ನಾಟಕ ಮುಸ್ಲಿಂ ಜಮಾಅತ್, SჄS, SSF ವತಿಯಿಂದ ಸುನ್ನೀ ಸೆಂಟರ್ ಕಲ್ಲುಗುಂಡಿ ಇದರ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗೂನಡ್ಕ ಖತೀಬರಾದ ಮುಹಮ್ಮದಲಿ ಸಖಾಫಿ ಮಾದಾಪುರ ರವರು ದುಆಃ ಮೂಲಕ ಚಾಲನೆ ನೀಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಉಮರ್ ಬೀಜದಕಟ್ಟೆ ಯವರು ಧ್ವಜಾರೋಹಣ ಮಾಡಿ ಸಂದೇಶ ಭಾಷಣ ಮಾಡಿದರು. ರಾಷ್ಟ್ರ ಗೀತೆಯ ಬಳಿಕ ಅತಿಥಿಗಳಾಗಿ ಆಗಮಿಸಿದ ಮುಹಿಯ್ಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟ್ಯಾರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹನೀಫ್ ಎಸ್ ಕೆ ಸಂಪಾಜೆ ಯವರು ಸ್ವಾತಂತ್ರ್ಯ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಐಸಿಎಫ್ ನಾಯಕರಾದ ಅಬ್ದುಲ್ಲಾ ಸಂಪಾಜೆ, ಮಂಜುನಾಥ ಕೀಲಾರು, ಮಂಜುನಾಥ ಸಜ್ಜನ ಪ್ರತಿಷ್ಠಾನ, ಎಸ್ಸೆಸ್ಸಫ್ ಯೂನಿಟ್ ಅಧ್ಯಕ್ಷರಾದ ಅಲೀ ಚಟ್ಟೆಕಲ್ಲು, ಕೋಶಾಧಿಕಾರಿ ಆಶಿಕ್, ಕಾರ್ಯದರ್ಶಿ ಹಸೈನ್ ಚಟ್ಟೆಕಲ್ಲು, ಝಾಕಿರ್ ಕೊಯನಾಡು, ಎಸ್ ವೈ ಎಸ್ ಉಪಾಧ್ಯಕ್ಷ ಜಲೀಲ್, ಕಾರ್ಯದರ್ಶಿ ಅಶ್ರಫ್ ಚಡಾವು, ಅಝೀಝ್ ಸಂಪಾಜೆ, ಹಮೀದ್ ಸಂಪಾಜೆ ಸಹಿತ ಹಲವರು ಭಾಗವಹಿಸಿದ್ದರು. SჄS ಕಲ್ಲುಗುಂಡಿ ಯೂನಿಟ್ ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ಯವರು ಸ್ವಾಗತಿಸಿ ವಂದಿಸಿದರು. ರುನೈಝ್ ಕೊಯನಾಡು ಕಾರ್ಯಕ್ರಮವನ್ನು ನಿರೂಪಿಸಿದರು.  ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು. ಜೊತೆಯಲ್ಲಿ ಕಲ್ಲುಗುಂಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಜಾಥಾ ಹಾದು ಬಂದಾಗ ಅವರಿಗೂ ಸಿಹಿ ತಿಂಡಿ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading