Ad Widget

ತುಳುನಾಡ ಜನಪದೀಯ ಆಚರಣೆಗಳು ಭವಿಷ್ಯಕ್ಕೆ ದಾರಿದೀಪ – ಸುಬ್ರಹ್ಮಣ್ಯದಲ್ಲಿ ನಡೆದ ಆಟಿದ ಪರ್ಬ ಉದ್ಘಾಟಿಸಿ ಡಾ.ನಿಂಗಯ್ಯ ಅಭಿಮತ

ಆಧುನಿಕ ಜಂಜಾಟದಲ್ಲಿ ನಾವು ಸಾಂಪ್ರದಾಯಿಕ ಆಚರಣೆಗಳನ್ನು ಹಾಗೂ ಜನಪದೀಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ತುಳುನಾಡಿನ ವಿಶೇಷ ಸಂಸ್ಕೃತಿಯ  ಬಗ್ಗೆ ಯುವ ಜನತೆಗೆ ತಿಳಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಪ್ರಾಚೀನ ತುಳುನಾಡ ಜನಪದೀಯ ಆಚರಣೆಗಳು ನಮ್ಮ ಭವಿಷ್ಯಕ್ಕೆ ದಾರಿದೀಪಗಳಾಗಿದೆ. ಅವುಗಳನ್ನು ಮುಂದಿನ ಪೀಳಿಗೆಯೂ ಬೆಳೆಸಿಕೊಳ್ಳಬೇಕು. ನಮ್ಮ ಜನಪದೀಯ ಆಚರಣೆಗಳ ಸ್ಪಷ್ಟ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಗಳು ಶ್ಲಾಘನೀಯ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಆಟಿದ ಪರ್ಬ ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡಿನ ಆಚರಣೆಗಳು ಸಂಸ್ಕೃತಿಯ ಜ್ಞಾನದ ಕಡಲಾಗಿದೆ. ಅಲ್ಲದೆ ಸಂಸ್ಕಾರಗಳ ಅಭಿವೃದ್ದಿಗೆ ಮೆಟ್ಟಿಲಾಗಿದೆ. ಪ್ರಕೃತಿಯು ವಿಕೃತಿಗೊಂಡಾಗ ಅದನ್ನು ಪ್ರಕೃತಿಯಿಂದಲೇ ಸರಿಪಡಿಸಬೇಕೆಂಬ ಜಾನಪದ ತತ್ವವನ್ನು ಆಟಿ ತಿಂಗಳು ಪ್ರತಿಪಾದಿಸುತ್ತದೆ ಎಂದರು.

. . . . . . . . .

ತುಳನಾಡ ಆಚರಣೆಗಳು ಜ್ಞಾನದ ಸಂಪತ್ತು: ಯಶವಂತ ರೈ
   ತುಳುನಾಡಿನ ಆಚರಣೆಗಳು ಸಂಸ್ಕಾರ ಜ್ಞಾನದ ಸಂಪತ್ತಾಗಿದೆ. ಇಲ್ಲಿ ಸಂಪ್ರದಾಯ ನಂಬಿಕೆಗಳು ಸಾಗರದಂತೆ ಅಗಾಧವಾಗಿದ್ದು, ಬದುಕಿಗೆ ಉತ್ತಮತೆಯನ್ನು ಬೋಧಿಸುತ್ತದೆ. ಮಾನವೀಯ ಮೌಲ್ಯಗಳನ್ನು ಹೊಂದಿದ ನಿರ್ಮಲ ಮನಸ್ಸು ಮತ್ತು ಆರೋಗ್ಯವಂತ ಜೀವನಕ್ಕೆ ಹಿರಿಯರು ನಡೆಸಿದ ಆಚರಣೆಗಳು ಸದಾ ಅನುಕರಣೀಯ ಎಂದು ದಿಕ್ಸೂಚಿ ಭಾಷಣ ಮಾಡಿದ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ ಹೇಳಿದರು.
   ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವೇದಿಕೆಯಲ್ಲಿದ್ದರು. ಪ್ರಥಮ ಕಲಾ ವಿಭಾಗದ ಮೌಲ್ಯ ಸ್ವಾಗತಿಸಿದರು.ದ್ವಿತೀಯ ವಿಜ್ಞಾನ ವಿಭಾಗದ ಪ್ರಜ್ಞಶ್ರೀ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ತಂಡದ ಸಹಸಂಚಾಲಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು.ಉಪನ್ಯಾಸಕಿ ಶ್ರುತಿ ಯಾಲದಾಳು ಮತ್ತು ಉಪನ್ಯಾಸಕ ಶ್ರೀಧರ್ ಪುತ್ರನ್ ಸಹಕರಿಸಿದರು.

. . . . . . .

  ಕಾರ್ಯಕ್ರಮವನ್ನು ಹಿಂಗಾರ ಅರಳಿಸಿ, ಚೆನ್ನಮಣೆ ಆಡುವ ಮೂಲಕ ಉದ್ಘಾಟಿಸಲಾಯಿತು. ಬಾಳೆಯ ದಿಂಡಿನಿಂದ ಅಲಂಕೃತ ದೀಪವನ್ನು ಬಾಳೆದಿಂಡಿನಿಂದ ತಯಾರಿಸಿದ ಆರತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಉದ್ಘಾಟಿಸಿದರು. ಮುಳಿ ಮಾಡಿನ ಅಲಂಕಾರದ ವೇದಿಕೆ ಪ್ರಾಚೀನತೆಯನ್ನು ಎತ್ತಿ ಹಿಡಿಯಿತು. ತೆಂಗಿನ ಗರಿಗಳಿಂದ ತಯಾರಿಸಿದ ತಟ್ಟಿಯಿಂದ ವೇದಿಕೆಯನ್ನು ಅಲಂಕೃತಗೊಳಿಸಲಾಗಿತ್ತು.ಇಡೀ ಸಭಾಂಗಣವನ್ನು ಪ್ರಾಚೀನ ಶೈಲಿಯಲ್ಲಿ ಕಂಗೊಳಿಸುತ್ತಿತ್ತು. ಬಾಳೆ ಎಲೆ, ರಥಹೂವಿನಿಂದ ರಂಗೋಲಿ ಬಿಡಿಸಲಾಗಿತ್ತು.ಇದರ ನಡುವೆ ಕಲಶ ಇಡಲಾಗಿತ್ತು.ಇದರ ಸುತ್ತು ತುಳುನಾಡಿನಲ್ಲಿ ಆಟಿ ಸಮಯ ತಯಾರಿಸುವ ಖಾದ್ಯಗಳನ್ನು ಜೋಡಿಸಲಾಗಿತ್ತು. ಬಳಿಕ ತುಳುನಾಡ ಜನಪದೀಯ ನೃತ್ಯಗಳು ಪ್ರದರ್ಶಿತವಾಯಿತು. ಈ ನಡುವೆ ವಿದ್ಯಾರ್ಥಿ ಕಲಾವಿದ ಪೃಥ್ವಿನ್ ಆಟಿ ಆಚರಣೆಯ ಮಹತ್ವದ ಸಾರುವ ಕಲಾತ್ಮಕ ಚಿತ್ರ ಬಿಡಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading