
ಸವೆರಪುರ ಶಾಲೆಯಲ್ಲಿ ಶಾಲೆಯಲ್ಲಿ 76 ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಭಾರತೀಯ ಸೇನೆಯಲ್ಲಿ ಎನ್ ಎಸ್ ಜಿ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೆಂಕಟೇಶ್ ಊರುಬೈಲು ರವರು ಧ್ವಜಾರೋಹಣ ಮಾಡಿ, ಮಾತನಾಡಿದರು. ಎಲ್ಲಾ ಮಕ್ಕಳು ತಮ್ಮ ಜೀವನದಲ್ಲಿ ಒಂದು ಗುರಿ ಇಡಬೇಕು ಹಾಗೂ ಆ ಗುರಿಯನ್ನು ತಲುಪಲು ಸತತ ಪ್ರಯತ್ನ ಇರಬೇಕು, ಜೀವನದಲ್ಲಿ ಬರುವ ಅಡೆತಡೆಗಳನ್ನು ಕಷ್ಟಗಳನ್ನು ಎದುರಿಸಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ವ| ಫಾ | ಪಾವ್ಲ್ ಕ್ರಾಸ್ತ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಜಿ. ಕೆ, ಉಪಾಧ್ಯಕ್ಷೆ ಶ್ರೀಮತಿ ಲಿಸ್ಸಿ ಮೊನಾಲಿಸಾ, ವಾರ್ಡ್ ಸದಸ್ಯರುಗಳಾದ ಜಗದೀಶ ರೈ, ಶ್ರೀಮತಿ ವಿಮಲಾಪ್ರಸಾದ್ ಮತ್ತು ನಿಯೋಜಿತ ಉಪಾಧ್ಯಕ್ಷ ಎಸ್. ಕೆ ಹನೀಫ್, ಚರ್ಚ್ ಪಾಲಾನಾ ಮಂಡಳಿಯ ಉಪಾಧ್ಯಕ್ಷ ರಾದ ಸಿಲ್ವೆಸ್ಟರ್ ಡಿಸೋಜಾ, ಪಿಟಿಎ ಉಪಾಧ್ಯಕ್ಷ ಚೇತನ್ ಹಾರಂಬಿ, ಶಾಲಾ ಮುಖ್ಯ ಶಿಕ್ಷಕಿ ಸಿ. ಅನಿತಾ ಫೆರ್ನಾಂಡಿಸ್ ರವರು ಉಪಸ್ಥಿತರಿದ್ದರು. ಧ್ವಜಾರೋಹಣದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿನಿ ಕು. ಗ್ರೀಷ್ಮಾ ಏನ್. ಎಂ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಜ್ವಲ್ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.




