Ad Widget

ಸಂಪಾಜೆ: ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಹಾಗೂ ಕೆನರಾ ಬ್ಯಾಂಕ್ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

. . . . . . . . .

ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಸಂಪಾಜೆ ಹಾಗೂ ಕೆನರಾ ಬ್ಯಾಂಕ್ ಇದರ ಆಶ್ರಯದಲ್ಲಿ ಆಗಸ್ಟ್ 15 ರಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ದೇವಿಪ್ರಸಾದ್ ಡಿ ಎಸ್. ಇವರು ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ, ಕೆನರಾ ಬ್ಯಾಂಕಿನ ಮೆನೇಜರ್ ಅರ್ಜುನ್ ಕುಮಾರ್, ಕಲ್ಲುಗುಂಡಿ ಹಾಗೂ ಸುಳ್ಯ ಕರ್ನಾಟಕ ಕಂಪ್ಯೂಟರ್ ಕಲಿಕಾ ಕೇಂದ್ರದ ನಿರ್ದೇಶಕರಾದ ಕಿಶೋರ್ ಕುಮಾರ್ ಕೆ ಹಾಗೂ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು, ಅಲ್ಲದೆ ಸ್ಥಳೀಯ ಸಂಸ್ಥೆಯ ಮಾಲ್ಹಕರು ಹಾಗೂ ಅಟೋ ರಿಕ್ಷಾ ಚಾಲಕ ಮಾಲ್ಹಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸುಳ್ಯ ಸಂಸ್ಥೆಯ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮಿ ರವರು ಕಾರ್ಯಕ್ರಮವನ್ನು ನಿರೂಪಿಸಿ, ನಿರ್ದೇಶಕ ಕಿಶೋರ್ ಕುಮಾರ್ ಸ್ವಾಗತಿಸಿದರು ಹಾಗೂ ಗ್ರಾಮ ಒನ್ ಫ್ರಾಂಚೈಸಿ ಶ್ರೀಮತಿ ಧರ್ಮಾವತಿ ಕಿಶೋರ್ ರವರು ವಂದಿಸಿದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading