ವರದಿ : ರುನೈಝ್ ಕೊಯನಾಡು
ಕೊಯ್ನಾಡು ಎಸ್. ಎಸ್. ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಜಮಾತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್. ಎ.
ಧ್ವಜಾರೋಹಣವನ್ನು ನೆರವೇರಿಸಿದರು. ಖತೀಬರಾದ ಅಬ್ದುಲ್ ಹಮೀದ್ ಅಮ್ಜದಿ ಪ್ರಾರ್ಥಿಸಿ, ಸಂದೇಶ ಭಾಷಣಗೈದರು. ಜಾಬಿರ್ ಟಿ .ಝೆಡ್. ಪ್ರತಿಜ್ಞಾ ಬೋಧಿಸಿದರು. ಈ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಕೊಯನಾಡು ಕಲ್ಲುಗುಂಡಿ ಎಸ್ .ಎಸ್. ಎಫ್. ಶಾಖೆ ವತಿಯಿಂದ ಬಹುಮಾನವನ್ನು ವಿತರಿಸಲಾಯಿತು. ಜಮಾತ್ ಸಮಿತಿ ಸದಸ್ಯರುಗಳಾದ ಹಸೈನಾರ್ ಅಮೈ, ಕುನ್ಹಾಲಿ.ಕೆ ಎ, ರಫೀಖ್.ಟಿ. ಕೆ, ಹನೀಫ್ ಎಸ್. ಪಿ, ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಹಂಸ ಸಅದಿ ಸ್ವಾಗತಿಸಿ, ವಂದಿಸಿದರು.