ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಗೆ 50 ವರ್ಷ ತುಂಬಿ ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸುವ ಸಲುವಾಗಿ ಆ.15 ರಂದು ಪೂರ್ವಭಾವಿ ಸಭೆ ನಡೆಯಿತು. ಆಡಳಿತ ಮಂಡಳಿ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಎಸ್. ಅಂಗಾರ ಅವರು ಅಧ್ಯಕ್ಷತೆಯನ್ನು ವಹಿಸಿ ಊರ ಹಿರಿಯರು ಕಟ್ಟಿದ ಶಾಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮಗಿದೆ. 50 ವರ್ಷ ತುಂಬಿದ ಸಂಭ್ರಮವನ್ನು ಎಲ್ಲರೂ ಸೇರಿ ಆಚರಿಸಬೇಕಿದೆ. ಅದಕ್ಕೆ ಎಲ್ಲರೂ ಜೊತೆಯಾಗಬೇಕು ಎಂದರು.
ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು, ಆಡಳಿತ ಮಂಡಳಿ ಉಪಾಧ್ಯಕ್ಷರಾದ ಅಣ್ಣಾಜಿ ಗೌಡ ಪೈಲೂರು, ಕಾರ್ಯದರ್ಶಿ ತೇಜಸ್ವಿ ಕಡಪಳ, ಖಜಾಂಜಿ ಹರ್ಷವರ್ಧನ ಬೊಳ್ಳೂರು, ನಿರ್ದೇಶಕರಾದ ಆನಂದ ಚಿಲ್ಪಾರು, ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ ಮಾಯ್ಪಡ್ಕ, ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಚೈತ್ರಾ ಯು. ಹಾಗೂ ಹಿರಿಯ ಶಿಕ್ಷಕಿ ಸಂಧ್ಯಾಕುಮಾರಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕರಾದ ಎಂ.ಟಿ. ಶಾಂತಿಮೂಲೆ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಅರುಣ ನಾಯರ್ ಕಲ್ಲು, ವೆಂಕಟ್ರಮಣ ಇಟ್ಟಿಗುಂಡಿ, ಭಾಸ್ಕರ ಮೇರ್ಕಜೆ, ಜಗನ್ನಾಥ ಹಿರಿಯಡ್ಕ, ಸನತ್ ದೇರಾಜೆ, ಸತ್ಯಪ್ರಸಾದ್ ಪುಳಿಮಾರಡ್ಕ, ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾಭಿಮಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ವಿವಿಧ ಸಮಿತಿಗಳನ್ನು ರಚಿಸಲಾಯಿತು.
- Saturday
- November 2nd, 2024