ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡ
ಹಾಗೂ ಹನುಮಾನ್ ಶಾಖೆ ಆರಂತೋಡು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆ ಆ.13 ರಂದು ಅರಂತೋಡಿನಲ್ಲಿ ನಡೆಯಿತು. ಪಂಜಿನ ಮೆರವಣಿಗೆ ಕೋಡಂಕೇರಿ ಕೋರಗಜ್ಜನ ದ್ವಾರದಿಂದ ಹೊರಟು ದುರ್ಗಾಮತಾ ಮಂದಿರದಲ್ಲಿ ಸಮಾಪನಗೊಂಡಿತು. ನಂತರ ಸಭಾ ಕಾರ್ಯಕ್ರಮ ಆರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆಯಿತು. ನಳಿನಾಕ್ಷಿ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ದಿಕ್ಸೂಚಿ ಭಾಷಣ ಮಾಡಿದರು ವೇದಿಕೆಯಲ್ಲಿ ವಿಶ್ವಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಅರಂತೋಡು ಹನುಮಾನ್ ಶಾಖೆಯ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು ಉಪಸ್ಥಿತರಿದ್ದರು. ಸಭೆಯ ಅದ್ಯಕ್ಷತೆಯನ್ನು ನಿವೃತ ಸೈನಿಕ ರಾದ ಮಾಧವ ಮೇಲಡ್ತಲೆ ವಹಿಸಿದ್ದರು. ಪರಿವಾರದ ಹಿರಿಯರು ಕಾರ್ಯಕರ್ತರು ಹಾಗೂ ಮಾತೆಯರು ಉಪಸ್ಥಿತರಿದ್ದು ವಂದೇ ಮಾತರಂ ಗೀತೆ ಯನ್ನು ಹಾಡಿದರು. ಕುಸುಮಾಧರ ಅಡ್ಕಬಳೆ ಸ್ವಾಗತಿಸಿ, ರಾಜೇಂದ್ರ ಮರ್ಕಂಜ ವಂದಿಸಿದರು. ಜೀವನ ಮಾಸ್ಟರ್ ಆರಂತೋಡು ನಿರೂಪಿಸಿದರು.
- Thursday
- November 21st, 2024