ಆ.12 ರಂದು ಸಂಜೆ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಹಿಂದು ಸಂಘಟನೆಗಳಿಗೆ ಮಾಹಿತಿ ನೀಡಿದಾತನ ಬಂಧಿಸಿರುವ ಬಗ್ಗೆ ತಿಳಿದುಬಂದಿದೆ.
ಸುಳ್ಯದ ಖಾಸಗಿ ಹೋಟೆಲ್ ಬಂದ ಜೋಡಿಯ ಬಗ್ಗೆ ಸಿಬ್ಬಂದಿ ವಿಡಿಯೋ ದೃಶ್ಯಾವಳಿಗಳನ್ನು ಸಂಘಟನೆಯ ಕಾರ್ಯಕರ್ತರಿಗೆ ಹಂಚಿದ್ದು ಇದರಿಂದಾಗಿ ನಿನ್ನೆಯ ಎಲ್ಲಾ ಘಟನೆಗಳಿಗೆ ಮುಖ್ಯ ಕಾರಣವೆಂದು ಮನಗಂಡ ಸುಳ್ಯ ಪೋಲೀಸರು ಆತನನ್ನು ಬಂಧಿಸಿದ ಘಟನೆ ಇದೀಗ ವರದಿಯಾಗಿದೆ.
ಜಲೀಲ್ ಮೇಲೆ ನಡೆದ ಹಲ್ಲೆ ಪ್ರಕರಣ ಕೇಸು ದಾಖಲಾದ ಬಳಿಕ ಆ.12ರ ರಾತ್ರಿ ಠಾಣೆಯ ಮುಂಬಾಗಲ್ಲಿ ಭಾರಿ ಹೈಡ್ರಾಮ ನಡೆದಿದ್ದು ಓರ್ವನನ್ನು ಬಂಧಿಸಿ ಮುಚ್ಚಳಿಕೆಯ ಬರೆಸಿ ಬಿಟ್ಟು ಕಳುಹಿಸಲಾಗಿತ್ತು. ಇದೀಗ ಲಾಡ್ಜ್ ಸಿಬ್ಬಂದಿ ಪುನೀತ್ ಸೋಣಂಗೇರಿ ಎಂಬಾತನನ್ನು ಪೋಲಿಸರು ಬಂಧಿಸಿದ್ದು, ವಿಡಿಯೋ ಪಡೆದುಕೊಂಡ ಇನ್ನೊರ್ವ ಆರೋಪಿಯ ಹುಡುಕಾಟ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳ ಪ್ರಕಾರ ತಿಳಿದುಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿ ಸುಳ್ಯದಲ್ಲಿ ಒಂದು ಹೋಟೆಲ್ ನಲ್ಲಿ ರೂಮ್ ಪಡೆಯಲು ಹೋದಾಗ ಅಲ್ಲಿ ಜಾತಿಯನ್ನು ನೋಡಿ ರೂಮ್ ನೀಡದೇ ಇದ್ದ ಕಾರಣ ಅವರು ಅಲ್ಲಿಂದ ಇನ್ನೊಂದು ಹೋಟೆಲ್ ಹೋಗಿ ರೂಮ್ ಪಡೆದಿದ್ದರು. ಈ ವಿಚಾರ ರೂಮ್ ನೀಡಿದ ಹೋಟೆಲ್ ಸಿಬ್ಬಂದಿಗಳ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ತೆರಳಲು ಸೂಚಿಸಿದ್ದಾರೆ. ಇತ್ತ ರೂಮ್ ಪಡೆದಿದ್ದ ಜಲೀಲ್ ತಾನು ಅರಂತೋಡು ಬಳಿ ಲೀಸ್ ಗೆ ಪಡೆದಿದ್ದ ತೋಟಕ್ಕೆ ತೆರಳುತ್ತಿದ್ದಾಗ ಹಲ್ಲೆಯಾಗಿತ್ತು. ಸೂಕ್ಮ ಪ್ರಕರಣವಾಗಿರುವುದರಿಂದ ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆನ್ನಲಾಗಿದೆ.