ಕರ್ನಾಟಕ ಸರಕಾರದ ಜಿಲ್ಲಾ ನೊಂದನಾಧಿಕಾರಿಯವರಿಂದ ನೋಂದಾವಣೆಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ವಿಶ್ವನಾಥ ನಡುತೋಟ ನೇಮಕಗೊಂಡರು. ಕಾರ್ಯದರ್ಶಿ ಯಾಗಿ ವಿಜಯವಾಣಿ /ಹೊಸ ದಿಗಂತ ಪತ್ರಿಕೆಯ ರತ್ನಾಕರ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಲೋಕೇಶ್ ಬಿ ಎನ್, ಕೋಶಾಧಿಕಾರಿಯಾಗಿ ವಿಜಯ ಕರ್ನಾಟಕ/ ಕನ್ನಡ ಪ್ರಭ ಪತ್ರಿಕೆಯ ಪ್ರಕಾಶ್ ಸುಬ್ರಹ್ಮಣ್ಯ, ನೇಮಕಗೊಂಡಿರುವರು. ನಿರ್ದೇಶಕರುಗಳಾಗಿ ಉದಯವಾಣಿ ಪತ್ರಿಕೆಯ ದಯಾನಂದ ಕಲ್ಲಾರ್ , ಸುದ್ದಿ ಬಿಡುಗಡೆ ಪತ್ರಿಕೆಯ ಶಿವರಾಮ ಕಜೆಮೂಲೆ ,ಚಾನೆಲ್ 9 /ನ್ಯೂಸ್ ಬಂಟ್ವಾಳದ ಶಿವ ಭಟ್ ,ವಿಶ್ವವಾಣಿ & ದಿಗ್ವಿಜಯದ ಸಂತೋಷ್ ಸುಬ್ರಹ್ಮಣ್ಯ, ಸ್ಪೀಡ್ ನ್ಯೂಸ್ ನ ನಾಗೇಶ್ ಮಡಿವಾಳ, ಕಹಳೆ ನ್ಯೂಸ್ ನ ಸುಪ್ರೀತ್ ಗೌಡ ನೇಮಕಗೊಂಡಿರುತ್ತಾರೆ.
- Thursday
- November 21st, 2024