
ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಆ 11 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದ ಸಭಾ ಭವನದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸುಳ್ಯ ತಾಲೂಕಿನ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ಚುನಾಯಿತರಾದ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಪಕ್ಷದ ನೆಲೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಸುಳ್ಯ ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ನಿಯಂತ್ರಣದ ಬಗ್ಗೆ ಚರ್ಚಿಸಲಾಗಿ ಸಭೆಯ ನಂತರ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಉಪ ನಿರೀಕ್ಷಕರನ್ನು ಭೇಟಿಯಾಗಿ ಆದಷ್ಟು ಬೇಗ ಪ್ರಕರಣ ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಮನವಿ ಮಾಡುವುದಾಗಿ ತೀರ್ಮಾನಿಸಲಾಯಿತು.ಸಭೆಯಲ್ಲಿ ಪಕ್ಷದ ಕೆಪಿಸಿಸಿ ಪಧಾಧಿಕಾರಿ ಧನಂಜಯ ಅಪ್ಪಂಗಾಯ,ಸಂಪಾಜೆ ವಲಯಾಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಪ್ರಮುಖರಾರದ ಮಹಮ್ಮದ್ ಪವಾಜ್, ಆಬುಸಾಲಿ ಗೂನಡ್ಕ , ಮಹಮ್ಮದ್ ಕುಂಞ ಗೂನಡ್ಕ,ನಂದರಾಜ್ ಸಂಕೇಶ ,ಲಕ್ಷ್ಮಣ ಗೌಡ ಬೋಳ್ಳಾಜೆ, ಲೋಕೇಶ್ ಅಕ್ರಿಕಟ್ಟೆ ಕಳಂಜ ವಿಶ್ವನಾಥ ರೈ, ರಾಧಾಕೃಷ್ಣ ಪರಿವಾರಕಾನ, ಮಜೀದ್ ಜಾಲ್ಲೂರು, ತಿಮ್ಮಯ್ಯ ತೊಡಿಕಾನ, ಸದಾನಂದ ಮಾವಜಿ, ಅಶೋಕ್ ಚೂಂತಾರು, ವಿಜಯಕುಮಾರ್ ಕನಕಮಜಲು ಮೊದಲಾದವರು ಪಕ್ಷದ ಸಂಘಟನೆ ವಿಚಾರದಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ ಸ್ವಾಗತಿಸಿ ವಂದಿಸಿದರು. ಈ ಸಭೆಯಲ್ಲಿ ಪಕ್ಷದ ಬ್ಲಾಕ್ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.