ಅಜ್ಜಾವರ ಗ್ರಾಮ ಪಂಚಾಯತ್ ಮತ್ತು ಗ್ರಂಥಾಲಯ ವತಿಯಿಂದ ಗ್ರಂಥಾಲಯದ ಪಿತಾಮಹಾರಾದ ಎಸ್ ಆರ್ ರಂಗನಾಥ್ ರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಗ್ರಂಥಾಲಯ ದಿನಾಚರಣೆ ನಡೆಯಿತು . ಡಿಜಿಟಲ್ ಲೈಬ್ರೆರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು .
ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಿಮಿಸಿ ಗೋಪಿನಾಥ್ ಮುಖ್ಯಶಿಕ್ಷಕರು ಮಾತಾನಾಡುತ್ತಾ ವಿಧ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಧ್ಯಾರ್ಥಿಗಳು ಮತ್ತಷ್ಟು ಬೆಳೆಯಬೇಕು ಎಂದು ಹೇಳಿದರು.
ಸಭಾ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲೀಲಾ ಮನಮೋಹನ್ , ಪ್ರತಾಪ್ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ , ವಿಷ್ಣು ಯುವಕಮಂಡಲದ ಅಧ್ಯಕ್ಷರಾದ ರಂಜಿತ್ ರೈ ಮೇನಾಲ , ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ , ಸಾಹಿತಿ ವಿಮಾಲ ಅರುಣ ಪಡ್ಡಂಬೈಲು , ಗ್ರಾಮ ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ , ಪ್ರಸಾದ್ ರೈ ಮೇನಾಲ , ರವಿರಾಜ್ , ಗ್ರಂಥ ಪಾಲಕಿ ಕು. ಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕರುಣಾಕರ ಕರ್ಲಪ್ಪಾಡಿ , ಮಣಿಕಂಠ ಹಾಸ್ಪಾರೆ , ಶೌಕತ್ ಮೇನಾಲ ಹಾಗೂ ಗ್ರಾಮ ವ್ಯಾಪ್ತಿಯ ಶಾಲಾ ವಿಧ್ಯಾರ್ಥಿಗಳು ಮತ್ತಿತತರು ಉಪಸ್ಥಿತರಿದ್ದರು.
ಊರಿನ ನಾಗರಿಕರಿಂದ ಗ್ರಾಮ ಪಂಚಾಯತ್ ಗೆ ದೇಣಿಗೆ ಮೂಲಕ ದೊರೆತ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ ಇವರು ಗ್ರಾಮ ಪಂಚಾಯತ್ ಗೆ ಕಾಲು ದೀಪವನ್ನು ಹಾಗೂ ಪೋಡಿಯಂನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ಲೀಲಾ ಮನಮೋಹನ್ , ಶೌಕತ್ ಆಲಿ ಗ್ಲೋಬೋ ವನ್ನು ತನ್ನ ಮಗಳ ಹುಟ್ಟು ಹಬ್ಬದ ಹೆಸರಿನಲ್ಲಿ ನೀಡಿದರು ಅಲ್ಲದಣೆ ಮಣಿಕಂಠ ಹಾಸ್ಪರೆ ಆದಿದೇವ್ ಎಂಬ ತನ್ನ ಮಗನ ಹೆಸರಿನಲ್ಲಿ ಕಂಪ್ಯೂಟರ್ ಟೇಬಲ್ ನ್ನು ಕೊಡುಗೆಯಾಗಿ ನೀಡಿದರು.