
ವಿಧಾನಸಭೆಯ ಕಾರ್ಯ ಕಲಾಪಗಳನ್ನು ಅನೇಕ ಕಠಿಣ ಸಂದರ್ಭಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಕರ್ನಾಟಕ ವಿಧಾನಸಭೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ವಿಧಾನಸಭೆ ಕಾರ್ಯದರ್ಶಿಯಾಗಿ ಹಲವು ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಇದೀಗ ವಿಧಾನಸಭಾಧ್ಯಕ್ಷರ ಮುಖ್ಯ ಸಲಹೆಗಾರರಾಗಿ ನೇಮಕ ಗೊಂಡಿರುವ ಓಂ ಪ್ರಕಾಶ್ ರನ್ನು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫರವರು ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಓಂ ಪ್ರಕಾಶ್ ರವರು ಅರಂತೋಡು ಗ್ರಾಮದ ಪಿಂಡಿಮನೆಯವರು. ಭೇಟಿಯ ಸಂದರ್ಭದಲ್ಲಿ ಬೆಳ್ತಂಗಡಿ ಮನ್ ಶರ್ ಪಿ ಯು ಕಾಲೇಜಿನ ಪ್ರಾoಶುಪಾಲ ಹೈದರ್ ಮರ್ದಾಳ ಉಪಸ್ಥಿತರಿದ್ದರು.
