Ad Widget

ಕಲ್ಮಡ್ಕ :  ಹದೆಗೆಟ್ಟ ರಸ್ತೆಯನ್ನು ಶ್ರಮದಾನ ನಡೆಸಿ  ಸಂಚಾರ ಯೋಗ್ಯ ರಸ್ತೆಯನ್ನಾಗಿಸಿದ  ಉತ್ಸಾಹಿ ಯುವಕರು

✍️ಭಾಸ್ಕರ ಜೋಗಿಬೆಟ್ಟು

. . . . . . .

ಸುಳ್ಯ ತಾಲೂಕಿನ ಅದೊಂದು ಪುಟ್ಟ ಗ್ರಾಮ. ಆ ಗ್ರಾಮಕ್ಕೆ ಸಂಬಂಧ ಪಟ್ಟ ಜೋಗಿಬೆಟ್ಟು ಎಂಬ ಸಣ್ಣ ಊರು. ಜೋಗಿಬೆಟ್ಟು ಮಂಞನಕಾನ ರಸ್ತೆಯು ನಡೆದುಕೊಂಡು ಹೋಗಲಾರದಷ್ಟು ಹದೆಗಟ್ಟಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ಜನರ ಓಡಾಟ ನಡೆಸುತ್ತಿದ್ದು ಶಾಲಾ ಮಕ್ಕಳಂತು ಪರದಾಟ ನಡೆಸುತ್ತಿದ್ದಾರೆ.

ಈ ರಸ್ತೆಯು ಮಳೆಗಾಲದಲ್ಲಿ ಪ್ರತಿ ವರ್ಷವೂ ಹದೆಗೆಡುವುದನ್ನು ರೂಢಿಯಾಗಿಸಿಕೊಂಡಿದೆ.  ಈ ವರ್ಷವೂ ಪುನರಾವರ್ತನೆಯಾಗಿದ್ದು ಮತ್ತೆ ಇಲ್ಲಿನ ಜನರೆ ರಸ್ತೆಯನ್ನು ಸರಿಪಡಿಸಬೇಕಾದ ದುಸ್ಥಿತಿ ಬಂದಿದೆ. ಅತ್ಯಂತ ಹಳೆಯ ಕಾಲದ ರಸ್ತೆಯಾಗಿರುವ‌ ಜೋಗಿಬೆಟ್ಟು ಮಂಞನಕಾನ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ . ಮಳೆಗಾಲದ ನೀರು ಮಧ್ಯ ಮಾರ್ಗದಲ್ಲಿಯೇ ಹರಿದುಹೋಗುತ್ತದೆ. ಈ ರಸ್ತೆಯು ನೂರಾರು ಮನೆಗಳಿಗೆ ಸಂಪರ್ಕವನ್ನು ನೀಡುತ್ತದೆ . ಈ ಭಾಗದಿಂದ ವಿದ್ಯಾಭ್ಯಾಸಕ್ಕಾಗಿ ಹಲವಾರು ವಿದ್ಯಾರ್ಥಿಗಳು ನಡೆದು ಕೊಂಡು ಹೋಗಬೇಕು. ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಡೆದುಕೊಂಡು ಹೋಗಲಾರದಷ್ಟು ಹದೆಗೆಟ್ಟಿರುವುದು ಮಾತ್ರ ಬೇಸರದ ಸಂಗತಿ. ದೊಡ್ಡ ದೊಡ್ಡ ಹೊಂಡ ಗುಂಡಿಗಳಿಂದ ಕೂಡಿದ  ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ನುಂಗಾಲಾದ ತುತ್ತಾಗಿದೆ. ಯಾವ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಿರುಗಿ ನೋಡದ  ಇಂತಹ ಮನಕರಗುವಂತಹ ದುಸ್ಥಿತಿಯನ್ನು ಕಂಡು ಇಲ್ಲಿನ ಉತ್ತಾಹಿ ಯುವಕರು ಈ ರಸ್ತೆಯನ್ನು ಕೆಲವೆ ಗಂಟೆಗಳಲ್ಲಿ ಸರಿಪಡಿಸಿ ಮೆಚ್ಚುಗೆಗೆ ಪಾತ್ತರಾಗಿದ್ದಾರೆ. ಹದೆಗೆಟ್ಟ ರಸ್ತೆಗೆ ಕಲ್ಲು , ಜಲ್ಲಿ ಹಾಸಿ ತಾತ್ಕಾಲಿಕವಾಗಿ ಸರಿಪಡಿಸಿ ರಸ್ತೆಗೆ ಜೀವ ತುಂಬಿದ್ದಾರೆ . ಈ ಯುವಕರ ಉತ್ಸಾಹ ಕೆಲಸದಿಂದಾಗಿ ಈ ಭಾಗದ ಜನರು ಇಂದು ಸುಗಮವಾಗಿ ವಾಹನ ಚಾಲನೆ ಮಾಡಲು,  ನಡೆದಾಡಲು ಆಗುವಂತಾಗಿದ್ದು ಸತ್ಯ. ಈ ಕೆಲಸದಲ್ಲಿ ಶ್ರೀನಿವಾಸ ಭಟ್ ಜೋಗಿಬೆಟ್ಟು, ವಿನೋದ್ ಮಾಳಪ್ಪಮಕ್ಕಿ, ಮಹೇಶ್ ಜೋಗಿಬೆಟ್ಟು, ಉಮೇಶ್ ಜೋಗಿಬೆಟ್ಟು, ವಾಡ್ಯಪ್ಪ ಗೌಡ ಜೋಗಿಬೆಟ್ಟು, ವಿಜಯ್ ಕಾಚಿಲ, ಉಮೇಶ್  ಭಾಗವಹಿಸಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!