
ಬೆಳ್ತಂಗಡಿಯ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಆ.10 ರಂದು ನಡೆದ ವಿದ್ಯಾ ಭಾರತಿಯ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಯ ಎಂಟನೇ ತರಗತಿಯ ವಿದ್ಯಾರ್ಥಿನಿ ನೇಹಾ.ಸಿ.ಪಿ. ನಾಲ್ಕನೇ ಬಹುಮಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಆಗಸ್ಟ್ 12ರಂದು ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕದಲ್ಲಿ ನಡೆಯಲಿರುವ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾಳೆ. ಎಲಿಮಲೆಯ ನಿಡ್ಪಳ್ಳಿ ಪುರುಷೋತ್ತಮ ಹಾಗೂ ಶ್ರೀಮತಿ ಜಾಹ್ನವಿ ದಂಪತಿಗಳ ಪುತ್ರಿ.
