
ಸುಬ್ರಹ್ಮಣ್ಯದ ಗಗನ ಇನ್ನರ್ವೀಲ್ ಕ್ಲಬ್ ವತಿಯಿಂದ ಕ್ಲಬ್ ನ ಅಧ್ಯಕ್ಷ ವೇದ ಶಿವರಾಂ ಅವರ ಏನೆಕಲ್ಲು ಮನೆಯಲ್ಲಿ ಆಗಸ್ಟ್ 5 ಆದಿತ್ಯವಾರ ಆಚರಿಸಲಾಯಿತು . ಆಟಿಯಲ್ಲಿ ಮಾಡತಕ್ಕ ವಿವಿಧ ಖಾದ್ಯಗಳನ್ನು ಪ್ರತಿಯೊಬ್ಬ ಸದಸ್ಯರು ಮನೆಯಲ್ಲಿ ಮಾಡಿ ತಂದು ಒಟ್ಟಿಗೆ ಸೇರಿ ಸಂತೋಷಕೂಟದೊಂದಿಗೆ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು .ಹಾಗೂ ಆಟಿಯ ತಿಂಗಳಲ್ಲಿ ಹಾಡುವ ಪದಗಳು, ಆಟಗಳು, ನೃತ್ಯಗಳು ಆಚರಣೆಗೆ ಮೇರುಗನ್ನ ತಂದಿತು. ಇನ್ನರ್ವೀನ್ ಕ್ಲಬ್ ನ ಪೂರ್ವ ಅಧ್ಯಕ್ಷರುಗಳಾದ ಶೋಭಾ ಗಿರಿಧರ್, ಭಾರತಿ ದಿನೇಶ್, ಸಚಿತ ಗೋಪಾಲ್, ಸರೋಜಾ ಮೈಲಪ್ಪ, ಲೀಲಾ ವಿಶ್ವನಾಥ್ ,ಕ್ಲಬ್ ನ ಕಾರ್ಯದರ್ಶಿ ಶ್ರುತಿ ಮಂಜುನಾಥ್, ಸದಸ್ಯರುಗಳಾದ ವಿಮಲ ರಂಗಯ್ಯ, ಚಂದ್ರಾವತಿ ಹೊನ್ನಪ್ಪ, ಗೀತಾ ರವಿ ಕಕ್ಕೆ ಪದವ್ ,ಶ್ರೀಜಾ ಚಂದ್ರಶೇಖರ ನಾಯರ್ , ಸುನಿತಾ ನವೀನ್, ಸೋನು ಭಟ್, ಯಶ್ಮಿತಾ ಅತ್ಯಾಡಿ, ಹಾಗೂ ಸಾಹಿತ್ಯ ಪ್ರವೀಣ್ ಮುಂಡೋಡಿ ಹಾಜರಿದ್ದರು.
