

ಕಲ್ಮಡ್ಕ ಗ್ರಾ.ಪಂ.ನ ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಉಪಾಧ್ಯಕ್ಷರಾಗಿ ಮೋಹಿನಿ ಮಾಳಪ್ಪಮಕ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ನ ಎಲ್ಲಾ ಸದಸ್ಯರೂ ಉಪಸ್ಥಿತರಿದ್ದುದರಿಂದ ಅವರೆಲ್ಲರ ಒಪ್ಪಿಗೆಯ ಮೇರೆಗೆ ಚುನಾವಣಾ ಪ್ರಕ್ರಿಯೆಯನ್ನು ಒಂದು ಗಂಟೆ ಮೊದಲು ನಡೆಸಲಾಯಿತು.ಚುನಾವಣಾಧಿಕಾರಿಯಾಗಿ ವಲಯಾರಣ್ಯಾಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದರು. ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣರು ಸಹಕರಿಸಿದರು. ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್, ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಪವಿತ್ರ ಕುದ್ವ, ಹರೀಶ್ ಮಾಳಪ್ಪಮಕ್ಕಿ, ಜಯಲತಾ ಕರಿಕ್ಕಳ, ಮೀನಾಕ್ಷಿ ಬೊಮ್ಮೆಟ್ಟಿ, ಲೋಕಯ್ಯ ಬಿಳಿಯೂರು, ಮಾಜಿ ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಪಡ್ಡಿನಂಗಡಿ, ವೆಂಕಪ್ಪ ಪೂಜಾರಿ ಬೆಳಗಜೆ, ಮಹಮ್ಮದ್ ಮರಕ್ಕಡ, ಮಾಜಿ ಅಧ್ಯಕ್ಷ ಧರ್ಮಣ್ಣ ನಾಯ್ಕ ಗರಡಿ, ಶ್ರೀನಿವಾಸ ಭೀಮಗುಳಿ, ಗಣೇಶ್‌ಪ್ರಸಾದ್ ಭೀಮಗುಳಿ ಉಪಸ್ಥಿತರಿದ್ದರು.