
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಆ.9 ರಂದು ನಿಗದಿಯಾಗಿತ್ತು. ಅಧ್ಯಕ್ಷತೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಸುಲೋಚನ ದೇವ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷತೆಗೆ ಲೀಲಾವತಿ ಡಿ ನಾಮಪತ್ರ ಸಲ್ಲಿಸಿದ್ದರು. ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಅವರ ಪರ ಮತ್ತು ವಿರೋಧಿ ಬಣಗಳ ಮಧ್ಯೆ ಸಮನ್ವಯ ಬಾರದೇ ಇದ್ದ ಹಿನ್ನೆಲೆಯಲ್ಲಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದ ಸುಲೋಚನ ದೇವ ನಾಮಪತ್ರ ವಾಪಾಸ್ ಪಡೆದಿದ್ದರು. ಈ ನಾಟಕೀಯ ಬೆಳವಣಿಗೆಯಿಂದಾಗಿ ಉಪಾಧ್ಯಕ್ಷರ ಆಯ್ಕೆ ಮಾತ್ರ ಅವಿರೋಧವಾಗಿ ನಡೆದಿದ್ದು, ಅಧ್ಯಕ್ಷರ ಆಯ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅರಬಣ್ಣ ಪೂಜೇರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರುಪ್ರತಿಷ್ಠೆಯ ಕಣವಾಗಿದ್ದ ದೇವಚಳ್ಳದಲ್ಲಿ ಬಣ ರಾಜಕೀಯ ಮತ್ತೆ ಗರಿಗೆದರಿ ಕೆಲ ಸದಸ್ಯರಲ್ಲಿ ಗೊಂದಲ ಉಂಟಾಗಿ ರಾಜೀನಾಮೆ ನೀಡುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುಲೋಚನ ದೇವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಡಿ. ನಾಮಪತ್ರ ಸಲ್ಲಿಸಿದ್ದರು. ಆದರೇ ಶೈಲೇಶ್ ವಿರುದ್ಧವಿರುವ ಬಣ ಮಾತ್ರ ಅಧ್ಯಕ್ಷ ಸ್ಥಾನ ಪ್ರೇಮಲತಾ ಕೇರ ಅವರಿಗೆ ಕೊಡಬೇಕು ಎಂದು ಬೇಡಿಕೆ ಇರಿಸಿತ್ತು. ಹರೀಶ್ ಕಂಜಿಪಿಲಿ ಕೂಡ ದೇವಚಳ್ಳಕ್ಕೆ ಬಂದು ತಂತ್ರಗಾರಿಕೆ ನಡೆಸಿ ತೆರಳಿದ್ದರು. ಈ ತೀರ್ಮಾನ ಬದಲಾಗಬಹುದೆಂದು ಕೊನೆಯವರೆಗೂ ಕಾದ ಶೈಲೇಶ್ ಅಂಬೆಕಲ್ಲು ತಂಡ ಅಧ್ಯಕ್ಷತೆಗೆ ಸಲ್ಲಿಸಿದ್ದ ನಾಮಪತ್ರ ವಾಪಾಸ್ ಪಡೆಯುವ ಬಗ್ಗೆ ತೀರ್ಮಾನ ಕೈಗೊಂಡಿತ್ತು.