Ad Widget

ಸುಬ್ರಹ್ಮಣ್ಯ : ಇನ್ನರ್ ವ್ಹೀಲ್ ಕ್ಲಬ್ ಪದಗ್ರಹಣ

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪ್ರಾಯೋಜಿತ ಇನ್ನರ್ ವ್ಹೀಲ್  ಕ್ಲಬ್ ನ ಪದಗ್ರಹಣ ಸಮಾರಂಭವು ಜುಲೈ 22ರಂದು ಇಂಜಾಡಿಯ ಮಹಮ್ಮಾಯ ರೆಸಿಡೆನ್ಸಿ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ಮಾಲಪ್ಪ ವಹಿಸಿದ್ದರು. ಇನ್ನರ್ ವ್ಹೀಲ್ ಕ್ಲಬ್ 2022 23ನೇ ಸಾಲಿನಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಸೌಮ್ಯ ದಿನೇಶ್ ವಾಚಿಸಿದರು ಅಧ್ಯಕ್ಷೆ ಸರೋಜಾ ಮೈಲಪ್ಪ  ರವರು 22- 23ನೇ ಸಾಲಿನ ತನ್ನ ಅಧ್ಯಕ್ಷ ಅವಧಿಯಲ್ಲಿ ಸಹಕರಿಸಿದವರಿಗೆ  ಅಭಿನಂದಿಸಿದರು .                   

. . . . . . . . .

2023 24ನೇ ಸಾಲಿನ ನೂತನ ಅಧ್ಯಕ್ಷ ವೇದ ಶಿವರಾಮ್ ರವರಿಗೆ ಪದಗ್ರಹಣ ಅಧಿಕಾರಿ ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ನ ಪೂರ್ವಾಧ್ಯಕ್ಷೆ ಹರ್ಷಿತಾ ಪುರುಷೋತ್ತಮ ಅಧಿಕಾರ ಹಸ್ತಾಂತರಿಸಿದರು, ಹಾಗೂ ಪ್ರಮಾಣವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷ ಸವಿತಾ ನಾರ್ಕೋಡ್ ಸುಬ್ರಹ್ಮಣ್ಯ ರೋಟರಿ ಕ್ಲಬ್ ಜಿ. ಎಸ್. ಆರ್ .ಸವಣೂರು ಸೀತಾರಾಮ ರೈ ,ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ವೇದ ಶಿವರಾಂ ರವರು ಏನೆಕಲ್ ಅಂಗನವಾಡಿ ಅಭಿವೃದ್ಧಿಗೆ ಹಾಗೂ ಅಶಕ್ತರಿಗೆ ಸಹಾಯಧನ ವಿತರಿಸಿದರು. ಇನ್ನು ಮುಂದಕ್ಕೆ ನಡೆಸಲಾಗುವ ವಿವಿಧ ಕಾರ್ಯ ಚಟುವಟಿಕೆಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ನೂತನ ಅಧ್ಯಕ್ಷರು ವಿನಂತಿಸಿದರು. ಈ ಸಂದರ್ಭದಲ್ಲಿ ಯೋಗಾಸನದಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ ಗೌರಿತ ರಾಜೇಶ್ವರಿ ಅವರನ್ನು ಗೌರವಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ ನ ವಿಮಲಾ ರಂಗಯ್ಯ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಶೃತಿ ಮಂಜುನಾಥ್ ವಂದಿಸಿದರು .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading