Ad Widget

ಕಲ್ಲುಗುಂಡಿ : ಸುನ್ನೀ ಸೆಂಟರ್ ಉದ್ಘಾಟನೆ

  ಕಲ್ಲುಗುಂಡಿ : ಎಸ್ಸೆಸ್ಸೆಫ್, ಎಸ್ ವೈ ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಸೆಂಟರ್ ಕಾರ್ಯಾಚರಣೆಯ ವಿಶಾಲತೆಗಾಗಿ ಸಂಗಂ ಬಿಲ್ಡಿಂಗ್ ಗೆ ಸ್ಥಳಾಂತರಗೊಂಡು ದಿನಾಂಕ 05-08-2023 ಶನಿವಾರ ದಂದು ನೂರುಸ್ಸಾದಾತ್ ಸಯ್ಯಿದ್ ಬಾಯಾರ್ ತಂಙಳ್ ರವರ ಹಸ್ತದಿಂದ ಉದ್ಘಾಟನೆಗೊಂಡಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ತ್ವಾಹಿರ್ ಸಅದಿ ತಂಙಳ್ ಬಾಅಲವಿ ಸುಳ್ಯ ರವರು ದುಆಃ ಗೆ ನೇತೃತ್ವ ವಹಿಸಿ ಆತ್ಮೀಯ ಉಪದೇಶ ವನ್ನು ನೀಡಿದರು. ಎಸ್ಸೆಸ್ಸೆಫ್ ಯೂನಿಟ್ ಅಧ್ಯಕ್ಷರಾದ ಅಲೀ ಚಟ್ಟೆಕಲ್ಲುರವರ ಅಧ್ಯಕ್ಷತೆಯಲ್ಲಿ,  ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಾರ್ಯಾಚರಣೆಗೆ ಪ್ರೋತ್ಸಾಹ ನೀಡಿದರು. ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರು ಮಾತನಾಡಿ ಕಲ್ಲುಗುಂಡಿಯ ಕಾರ್ಯಾಚರಣೆಗೆ ಬೆಂಬಲ ನೀಡಿದರು. ಸಂಪಾಜೆ ಜಮಾಅತ್ ಸ್ವಲಾತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೋಂಬೈ ರವರು ಅತಿಥಿಗಳಾಗಿ ಭಾಗವಹಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಸವಾದ್ ಗೂನಡ್ಕ ಶುಭನುಡಿಯನ್ನಾಡಿದರು. ಕೊನೆಯದಾಗಿ ಅಬ್ದುಲ್ ಜಲೀಲ್ ಸಖಾಫಿ ಕೊಂಡಂಗೇರಿ ರವರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನಡೆದು ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ರಾಜ್ಯ ಸಮಿತಿ ನಾಯಕರಾದ ಸಿದ್ದೀಖ್ ಕಟ್ಟೆಕಾರ್, ಸುಳ್ಯ ಝೋನ್ ನಾಯಕರಾದ ಹಸೈನಾರ್ ಗುತ್ತಿಗಾರು ಸಹಿತ ಹಲವು ಗಣ್ಯರು ಭಾಗವಹಿಸಿದರು. ಎಸ್ಸೆಸ್ಸೆಫ್ ಕಲ್ಲುಗುಂಡಿ ಯೂನಿಟ್ ಪ್ರಧಾನ ಕಾರ್ಯದರ್ಶಿ ರುನೈಝ್ ಸ್ವಾಗತಿಸಿ ವಂದಿಸಿದರು. ಎ.ಎಂ.ಫೈಝಲ್ ಝುಹ್‌ರಿ ಕಾರ್ಯಕ್ರಮ ವನ್ನು ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading