ರಾಹುಲ್ ಗಾಂಧಿಯವರ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹ ಮಾಡಿದ ಮತ್ತು ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸುತ್ತೇವೆ.
ಇದೊಂದು ಅಪರೂಪದ ಬೆಳವಣಿಗೆ ಯಾಗಿದ್ದು ದೇಶದಲ್ಲಿ ಹಿಂದೆಂದೂ ಇಂತಹ ಪ್ರಕರಣ ಸಂಭವಿಸಿರಲಿಲ್ಲ. ಕೇವಲ ವಿರೋಧ ಪಕ್ಷವನ್ನು ತುಳಿಯಲು, ನಾಯಕರುಗಳನ್ನು ಅವಮಾನಿಸುವಂತ ಸಣ್ಣತನವನ್ನು ತೋರಿದ ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷಕ್ಕೆ ಇದು ಒಂದು ಪಾಠ ವಾಗಬೇಕು. ರಾಹುಲ್ ಗಾಂಧೀಯವರು ದೇಶದ ಸಮಸ್ಯೆಗಳನ್ನು ಮತ್ತು ಕೇಂದ್ರ ಸರಕಾರದ ವೈಫಲ್ಯಗಳನ್ನು ಸಂಸತ್ತಿನಲ್ಲಿ ಮಾತನಾಡುತ್ತಾರೆ ಎಂದು ಸಂಸತ್ ಸ್ಥಾನದಿಂದ ಅನರ್ಹಗೊಳಿಸುವ ಮತ್ತು ಸುಳ್ಳಿನ ಮುಖಾಂತರ ಸತ್ಯದ ಮೇಲೆ ಸವಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರಸರಕಾರ ಹೊರಟಿದೆ.
ರಾಹುಲ್ ಗಾಂಧಿಯವರ ಮೇಲಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸುವುದಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.