Ad Widget

ಗುತ್ತಿಗಾರು : ಅನಿಕೇತನ ವಿಶೇಷಚೇತನರ ಆರೈಕೆದಾರರ ಸಂಜೀವಿನಿ ಸ್ವಸಹಾಯ ಸಂಘ ರಚನೆ ಅಧ್ಯಕ್ಷರಾಗಿ ಮಿಶ್ರಿಯಾಕಾರ್ಯದರ್ಶಿಯಾಗಿ ದಿವ್ಯ.ಟಿ

. . . . . . .

ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ.04 ರಂದು ವಿಶೇಷಚೇತನರ ಸಭೆ ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ಅನಿಕೇತನ ವಿಶೇಷಚೇತನರ ಆರೈಕೆದಾರರ ಸಂಜೀವಿನಿ ಸ್ವಸಹಾಯ ಸಂಘ ರಚನೆಗೊಂಡಿತು. ಸಂಘದ ಅಧ್ಯಕ್ಷರಾಗಿ ಮಿಶ್ರಿಯಾ ಹಾಗೂ ಕಾರ್ಯದರ್ಶಿಯಾಗಿ ದಿವ್ಯ.ಟಿ ಆಯ್ಕೆಯಾದರು. ಈ ಸಂದರ್ಭದಲ್ಲಿ ತಾಲೂಕಿನ ಎಂ.ಆರ್.ಡಬ್ಲ್ಯೂ ಚಂದ್ರಶೇಖರ, ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕ ಅವಿನಾಶ್, ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕಾವೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷಚೇತನರ ಬಗ್ಗೆ ಮಾಹಿತಿ ನೀಡಲಾಯಿತು. ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕರು ಹಾಗೂ ಒಕ್ಕೂಟದ ಅಧ್ಯಕ್ಷೆ ಸಂಜೀವಿನಿ ಸ್ವಸಹಾಯ ಸಂಘದ ಉದ್ದೇಶವನ್ನು ಸದಸ್ಯರಿಗೆ ತಿಳಿಸಿದರು. ಗ್ರಂಥಪಾಲಕಿ ಅಭಿಲಾಷಾ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ.ಕೆ ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕಾವೇರಿ ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್.ಸಿ.ಆರ್.ಪಿ ದಿವ್ಯ ಚತ್ರಪ್ಪಾಡಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಗುತ್ತಿಗಾರು ಹಾಗೂ ನಾಲ್ಕೂರಿನ ವಿಶೇಷಚೇತನರು ಪೋಷಕರೊಂದಿಗೆ ಭಾಗವಹಿಸಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!