
ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ರಿ.ಸುಳ್ಯ ಘಟಕ ಇದರ ವತಿಯಿಂದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರನ್ನು 13/08/2023ರಂದು ಪುರಭವನದಲ್ಲಿ ಸನ್ಮಾನಿಸಲಾಗುವುದು ಹಾಗೂ 6/08/23ರಂದು ಕ್ರೀಡಾಕೂಟ ನಡೆಯಲಿದೆ ಎಂದು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಸಂಘದ ಗೌರವಾಧ್ಯಕ್ಷರಾದ ಬಾಬು ಕೆ ಎಂ ಜಾಲ್ಸೂರು ಹೇಳಿದರು . ಅವರು 05/08/2023 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತಾನಾಡುತ್ತಾ ನಮ್ಮ ಸಂಘವು 2002 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಸುದೀರ್ಘವಾಗಿ ಹಲವಾರು ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಅಲ್ಲದೇ ಕರೋನ ಬಂದ ಹಿನ್ನಲೆಯಲ್ಲಿ ಸ್ವಲ್ಪ ಸಮಯ ನಮಗೆ ಕಾರ್ಯ ಚಟುವಟಿಕೆ ನಡೆಸಲು ಅಸಾಧ್ಯವಾಗಿತ್ತು ಎಂದು ಹೇಳಿದರು . ದಿನಾಂಕ 6/08/2023 ರಂದು ಸುಳ್ಯದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಮ್ಮ ಸಮುದಾಯದ ಭಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದ್ದು ಬೆಳಗ್ಗೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು ದಿನಾಂಕ 12/08/2023 ರಂದು ಬೆಳಗ್ಗೆ 9ಕ್ಕೆ ಪುರಭವನದಲ್ಲಿ ಸತ್ಯಸಾರಮಣಿ ದೈವಗಳಿಗೆ ದೀಪ ಬೆಳಗಿಸುವುದರ ಮೂಲಕ ಮಾಯಿಲಪ್ಪ ಬೂಡು ಇವರ ನೇತ್ರತ್ವದಲ್ಲಿ ಸ್ಪರ್ಧಾಕಾರ್ಯಕ್ರಮ ಜರುಗಲಿದೆ ಅಲ್ಲದೇ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋನಪ್ಪ ರಾಜಾರಾಂಪುರ ವಹಿಸಲಿದ್ದಾರೆ, ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದು ಇದೇ ವೇದಿಕೆಯಲ್ಲಿ ನೂತನ ಶಾಸಕಿ ಕು.ಭಾಗೀರಥಿ ಮುರುಳ್ಯರನ್ನು ಸನ್ಮಾನ ಮಾಡಲಿದ್ದೇವೆ ಅಲ್ಲದೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ 10ನೇ ಮತ್ತು 12ನೇ ತರಗತಿಯ ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಈ ಸಭಾ ಕಾರ್ಯಕ್ರಮದಲ್ಲಿ ಶಿವಾನಂದ ಬಳ್ಳಾಲ್ ಬಾಗ್ , ಡಾ.ಯಶುಕುಮಾರ್ ಡಿ , ಸೋಮನಾಥ್ ಉಪ್ಪಿನಂಗಡಿ , ಶಿವರಾಜ್ ಪಿ ಬಿ , ಬಾಬು ಜಾಲ್ಸೂರು , ವಿನಯ ಕುಮಾರ್ ಕಂದಡ್ಕ , ಶ್ರೀನಿವಾಸ್ ಆರ್ಬಿಗುಡ್ಡೆ , ಚನಿಯ ಕಲ್ತಡ್ಕ , ಮೋಹನ್ ನೆಲ್ಲಿಗುಂಡಿ , ಹರೀಶ್ ಕಂಜಿಪಿಲಿ , ಪಿಸಿ ಜಯರಾಮ್ , ಸುಕುಮಾರ್ ಕೋಡ್ತುಗುಳಿ , ಹರೀಶ್ ಬಂಟ್ವಾಳ್ , ವಿಜಯ ಆಲಡ್ಕ , ಲಕ್ಷ್ಮಿ ಸುಬ್ರಹ್ಮಣ್ಯ , ರಾಮಚಂದ್ರ ಕೈಲಾ , ಮಲ್ಲೇಶ್ ಕುಡೇಕಲ್ಲು , ಚೋಮ ನಾವೂರು ಭಾಗವಹಿಸಲಿದ್ದಾರೆ ಹಾಗೂ ನಾವು ತಾಲೂಕು ಸಮಿತಿ ಮತ್ತು ನಗರ ಸಮಿತಿಯನ್ನು ಒಳಗೊಂಡಂತೆ 38 ಗ್ರಾಮ ಸಮಿತಿಗಳನ್ನು ಮಾಡಲಾಗಿದೆ ಇದರಲ್ಲಿ ಮಹಿಳಾ ಸಮಿತಿಯು ಒಳಗೊಂಡಿದೆ ಎಂದು ಅವರು ಹೇಳಿದರು . ಅಡ್ಪಂಗಾಯ ಕಾಲೋನಿಯಲ್ಲಿನ ಚುನಾವಣಾ ಸಂದರ್ಭದಲ್ಲಿ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಅಲ್ಲಿನ ಸಮಸ್ಯೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಆ ಜಾಗವು ಒಂದು ಭಂಡಾರದ ಸ್ಥಳ ಆಗಿದೆ ಅಡ್ಪಂಗಾಯ ಕುಟುಂಬದ ಮನೆತನದ ಎ ವಿ ವಿಕ್ರಂ ಜೊತೆ ನಾವು ಹಲವಾರು ರೀತಿಯಲ್ಲಿ ಮತಾನಾಡಿದ್ದೇವೆ ಪಕ್ಷದ ನಾಯಕರ ಮುಖಾಂತರ ಅವರಿಗೆ ಇದನ್ನು ಸರಿ ಪಡಿಸುವ ಭರಸೆಯ ಪತ್ರವನ್ನು ನೀಡಿದ್ದೇವೆ ಎಂದು ಅವರು ಹೇಳಿದರು .ಇದನ್ನು ನ್ಯಾಯವಾದಿಗಳ ಮುಖಾಂತರ ವಿಚಾರಿಸಿದಾಗ ಅದು ಅವರಿಗೆ ನೀಡಲು ಸಾಧ್ಯವಿಲ್ಲ ಅದು ಭಂಡಾರದ ಜಾಗ ಆದ ಕಾರಣ ಕಾನೂನಿನಲ್ಲಿ ಅವಕಾಶ ನೋಡಬೇಕಿದೆ ಎಂದು ಹೇಳಿದರು ಅಲ್ಲದೇ ಇವೆಲ್ಲ ನನಗಿರುವ ಮಾಹಿತಿ ಎಂದು ಹೇಳಿದರು . ಬಯಂಬು ಕಾಲೋನಿಯಲ್ಲಿ ಕೆಲವರಿಗೆ ಇದೇ ಪರಿಸ್ಥಿತಿಯ ವಿಚಾರ ಕೇಳಿದಾಗ ಅದು ಕೂಡಾ ಕೆಲವರು ಅದಲು ಬದಲು ಮಾಡಿದ ಕಾರಣ ಹಾಗೆ ಆಗಿದೆ ಅದನ್ನ ಖಾಸಗಿ ಜಮೀನಿನವರು ಬಿಟ್ಟು ಕೊಟ್ಟಿದ್ದಾರೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಧ್ಯಕ್ಷರಾದ ಮೋನಪ್ಪ ರಾಜಾರಾಂಪುರ , ಚೋಮ ಎನ್ ಬಿ , ವಿಜಯ ಆಲಡ್ಕಾ , ರಾಮಚಂದ್ರ ಕೊಯಿಲಾ , ಶಿವಪ್ಪ ಕೊಡಿಲು , ಕರಿಯಪ್ಪ ಕೊಡಿಲು ಮತ್ತಿತರರು ಉಪಸ್ಥಿತರಿದ್ದರು.