Ad Widget

ಸುಳ್ಯ ಎನ್ನೆoಪಿಯುಸಿಯಲ್ಲಿ ವಿಜ್ಞಾನ ಮಾದರಿ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ “DISCOVER SCI”ವಿಜ್ಞಾನ ಮಾದರಿ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.  ಮುಖ್ಯ ಅತಿಥಿಗಳಾಗಿ,ಕಾರ್ಯಕ್ರಮವನ್ನು ಉದ್ಘಾಟಿಸಿದ  ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಮಾಲಿನಿ ಕೆ.ಅವರು ಮಾತನಾಡಿ  ಪ್ರತಿಯೊಬ್ಬರಿಗೂ ಬದುಕುವ ಕಲೆ ಮುಖ್ಯ.ದೈನಂದಿನ ಜೀವನದಲ್ಲಿ ವಿಜ್ಞಾನದ ಬಳಕೆಯಾಗುತ್ತಿದೆ. ನಮ್ಮ ಜ್ಞಾನವನ್ನು ವೃದ್ಧಿಗೊಳಿಸಲು ನಮ್ಮನ್ನು ನಾವು ಪ್ರಶ್ನಿಸುವ ಗುಣ ಹೊಂದಿ, ಅವಲೋಕನ, ಕುತೂಹಲ, ಆತ್ಮವಿಶ್ವಾಸ, ಕಠಿಣ ಪರಿಶ್ರಮ ಗುಣಗಳ ಮೂಲಕ ಮುನ್ನಡೆಯಬೇಕು. ಆಗ ನಮ್ಮ ಬದುಕಿನಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜ್ಞೆಯನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳು ಹೊರಬರುವಲ್ಲಿ ವಿಜ್ಞಾನ ಮಾದರಿ ಸ್ಪರ್ಧೆಗಳು  ಪ್ರಯೋಜನಕಾರಿ.ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕುತೂಹಲ, ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆದಾಗ ಉತ್ತಮ ಫಲಿತಾಂಶ ದೊರಕುತ್ತದೆ.ಜೀವನವನ್ನು ಮುನ್ನಡೆಸುವಲ್ಲಿ ಪ್ರಯೋಗಶೀಲ ಪರಿಕಲ್ಪನೆಯ ಗುಣ ನಮಗೆ ಅನುಭವ ನೀಡುತ್ತದೆ ಎಂದರು.ವೇದಿಕೆಯಲ್ಲಿ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ,ವಿಜ್ಞಾನ ಸಂಘದ ಸಂಚಾಲಕಿ ವಿನುತ ಕೆ ಎನ್ ಉಪಸ್ಥಿರಿದ್ದರು.

. . . . . . .

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಎಂ ಪ್ರಾರ್ಥಿಸಿ, ಪುಣ್ಯಶ್ರೀ ಕೆ.ಜೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ವಿನುತ ಕೆ ಎನ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಪಿ ಆರ್ ಸ್ಮಿತಾ,”ವಿಜ್ಞಾನದ ಸಾಧನೆಗಳು “ಎಂಬ ವಿಷಯದ ಬಗ್ಗೆ,ಅಕ್ಷಯ್ ಎಸ್ ರೈ,”ಕೃತಕ ಬುದ್ಧಿ ಮತ್ತೆ “ವಿಷಯದ ಕುರಿತು ಮಾತನಾಡಿದರು.ವಿದ್ಯಾರ್ಥಿನಿಯರಾದ ಪಿ ಆರ್ ಸ್ಮಿತಾ ಮತ್ತು ಅಜ್ಞಾ ಐಪಲ್ ನಿರೂಪಿಸಿ, ಅನನ್ಯ ಎ ವಂದಿಸಿದರು.ಬಳಿಕ ವಿಜ್ಞಾನ ಮಾದರಿ ಸ್ಪರ್ಧೆ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!