Ad Widget

ಸುಬ್ರಹ್ಮಣ್ಯ ಮಂಗಳೂರು ಪ್ರಯಾಣಿಕರ ರೈಲು ಪ್ರಾರಂಭಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ನಳಿನ್ ಮನವಿ

. . . . . . .


ರೈಲ್ವೆ ಇಲಾಖೆಗೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೇ ಸಚಿವ Ashwini Vaishnaw ಅವರಿಗೆ ಮನವಿ ಸಲ್ಲಿಸಿದರು

ಅದರಲ್ಲಿ ಮುಖ್ಯವಾಗಿ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಬೆಂಗಳೂರು – ಮಂಗಳೂರು ರೈಲ್ವೆ ಲೈನ್ ಮೇಲ್ದರ್ಜೆಗೆ ಮತ್ತು ವಿದ್ಯುದೀಕರಣ. ಮಂಗಳೂರಿನಿಂದ ವಾರಣಾಸಿ, ಮಂಗಳೂರು-ರಾಮೇಶ್ವರಂ ಹಾಗೂ ಮಂಗಳೂರು ಬೀದರ್ ಮಧ್ಯೆ ಹೊಸ ರೈಲುಗಳು.
ತಿರುವಂತನಪುರಂನಿಂದ ಕಾಸರಗೋಡಿನ ತನಕ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಂಗಳೂರಿನ ತನಕ ವಿಸ್ತರಣೆ ಹಾಗೂ ಇದರಿಂದ ಎರಡು ನಗರಗಳ ಮಧ್ಯೆ ಶೀಘ್ರ ಸಂಪರ್ಕ, ಅಲ್ಲದೆ ಪ್ರವಾಸೋದ್ಯಮಕ್ಕೆ ಬಹು ಅನುಕೂಲವಾಗಲಿದೆ.
ಸುಬ್ರಹ್ಮಣ್ಯ ರೋಡ್‌ನಿಂದ ಮಂಗಳೂರಿಗೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊಸ ರೈಲನ್ನು ಪ್ರಾರಂಭಕ್ಕೆ ಮನವಿ. ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಟರ್ಮಿನಲ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಜತೆಗೆ, ಈ ಭಾಗದ ರೈಲ್ವೆ ಉನ್ನತೀಕರಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!