- Thursday
- November 21st, 2024
ಸರಕಾರಿ ಪ್ರೌಢಶಾಲೆ ಯೇನೆಕಲ್ಲು ಇಲ್ಲಿ ಜು.26 ರಂದು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಕಾರ್ಗಿಲ್ ದಿನಾಚರಣೆ ನಡೆಯಿತು.ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಫಿಲಿಪ್ ಪಿ.ಟಿ, ಡಿ.ಆರ್ ರಾಧಾಕೃಷ್ಣ, ತೇಜಕುಮಾರ್ ಕೊಂದಾಳ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರು...
ಧರ್ಮಸ್ಥಳದಲ್ಲಿ ನಡೆದಂತ ಸೌಜನ್ಯಾಳ ಅತ್ಯಾಚಾರ ಕೊಲೆ ಖಂಡಿಸಿ ಈ ಪ್ರಕರಣವನ್ನು ಮರುತನಿಕೆ ಮಾಡಬೇಕೆಂದು ಮತ್ತು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಒತ್ತಾಯಿಸಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾಗ ಪಟ್ಟಣ ಅಂಬೇಡ್ಕರ್ ರಕ್ಷಣಾ ವೇದಿಕೆ ನಾಗ ಪಟ್ಟಣ ಘಟಕದ ವತಿಯಿಂದ ನಾಗ ಪಟ್ಟಣದಲ್ಲಿ ಜುಲೈ 3 ರಂದು ಬ್ಯಾನರ್ ಅಳವಡಿಸಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ಸುಳ್ಯ ತಾಲೂಕು ಸಮಿತಿಯ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಎಲ್ಲಾ ಚರ್ಚ್ಗಳ ಹಾಗೂ ಸಂಘಟನೆಗಳ ಸಹಕಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಿತು. ಸುಳ್ಯ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಸೂಚಕವಾಗಿ ಮೌನ...
ರೈಲ್ವೆ ಇಲಾಖೆಗೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೇ ಸಚಿವ Ashwini Vaishnaw ಅವರಿಗೆ ಮನವಿ ಸಲ್ಲಿಸಿದರು ಅದರಲ್ಲಿ ಮುಖ್ಯವಾಗಿ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಬೆಂಗಳೂರು – ಮಂಗಳೂರು ರೈಲ್ವೆ ಲೈನ್ ಮೇಲ್ದರ್ಜೆಗೆ ಮತ್ತು ವಿದ್ಯುದೀಕರಣ. ಮಂಗಳೂರಿನಿಂದ ವಾರಣಾಸಿ,...
ಕಳಂಜದ ಮಸೂದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಪೈಕಿ ಓರ್ವ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ.ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿರುವುದಾಗಿ ತಿಳಿದುಬಂದಿದೆ. 2022 ಜು.19ರಂದು ಕಳಂಜದಲ್ಲಿ 8 ಮಂದಿ ಯುವಕರ ತಂಡ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಮಸೂದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 8...
ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ಎಂಬಲ್ಲಿನ ಅಬ್ದುಲ್ ನವಾಝ್ ಎಂಬ ಯುವಕ ಮೂರು ವರ್ಷಗಳ ಹಿಂದೆ ರಿಹಾ ಫಾತಿಮ ಎಂಬುವವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಪತಿ ತನಗೆ ಕಿರುಕುಳ ನೀಡುತ್ತಿದ್ದು,ಇದೀಗ ಕೊಲೆಗೆ ಯತ್ನಿಸಿದ್ದಾರೆಂದು ಗಂಡನ ವಿರುದ್ಧ ಮಹಿಳೆ ಪೋಲೀಸರಿಗೆ ದೂರು ನೀಡಿದ ಘಟನೆ ಆ.2 ರಂದು ವರದಿಯಾಗಿದೆ. ಮಹಿಳೆ ನೀಡಿದ ದೂರಿನಲ್ಲಿ ವರದಕ್ಷಿಣೆ...
ಕರ್ನಾಟಕ ರಾಜ್ಯ ಭಾವೈಕ್ಯತೆ ಪರಿಷತ್ ದಕ್ಷಿಣ ಕನ್ನಡ ಆಯೋಜಿಸಿದ್ದ ರಾಜ್ಯಮಟ್ಟದ ಭಾವೈಕ್ಯತಾ ಕವಿ ಸಮ್ಮಿಲನ ಮತ್ತು ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ ಸಾಹಿತಿ , ಜ್ಯೋತಿಷಿ , ಸಂಘಟಕ ಮತ್ತು ಚಿತ್ರ ನಿರ್ದೇಶಕರಾದ ಎಚ್.ಭೀಮರಾವ್ ವಾಷ್ಠರ್ ಅವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಕ್ಬಾಲ್ ಬಾಳಿಲ ಅವರು ಪ್ರದಾನ ಮಾಡಿದರು . ಸಮಾರಂಭದ...
ಆಚಾರ್ಯ ಯೋಗ ಯೂತ್ ಕ್ಲಬ್(ರಿ.) ಬೆಂಗಳೂರು ಇವರು ಜು.30 ರಂದು ಬೆಂಗಳೂರಿನ ಶ್ರೀ ರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿ ಇಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್-2023 ರಲ್ಲಿ ನಿರಂತರ ಯೋಗ ಕೇಂದ್ರ ಏನೇಕಲ್ಲಿನ ವಿದ್ಯಾರ್ಥಿಗಳಾದ 8 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಶ್ವಿಕ.ಕೆ 5ನೇ ಸ್ಥಾನ, ಅಕ್ಷಯ.ಬಿ.ಎಮ್ 10ನೇ ಸ್ಥಾನ, ಅಶ್ವಿಕ.ಕೆ,...
✍️ಉಲ್ಲಾಸ್ ಕಜ್ಜೋಡಿ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಾನಿಗಳು ಸಂಭವಿಸಿದಾಗ, ಮೂರ್ನಾಲ್ಕು ಗ್ರಾಮಗಳು ಆ ಜಲಪ್ರಳಯಕ್ಕೆ ಸಿಲುಕಿ ಅಪಾರ ಹಾನಿ ಸಂಭವಿಸಿದರೆ ಎಷ್ಟೇ ವರ್ಷಗಳು ಕಳೆದರೂ ಆ ಕರಾಳ ನೆನಪುಗಳು ಜನರ ಮನಸ್ಸಿನಿಂದ ಎಂದಿಗೂ ಮರೆಯಾಗುವುದಿಲ್ಲ.ಕಳೆದ ಒಂದು ವರ್ಷದ ಹಿಂದೆ ಅಂದರೆ 2022ರ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಮ...