ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರುತನಿಖೆಗೊಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ವಾಹನ ಜಾಥಾ ನಡೆಸಿ ಸುಳ್ಯ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿ ಮುಂಭಾಗದಿಂದ ವಾಹನ ಜಾಥಾ ಆರಂಭಗೊಂಡಿತು. ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮಾತನಾಡಿ ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರುತನಿಖೆಗೊಳಪಡಿಸಿ 6 ತಿಂಗಳೊಳಗೆ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಇಂದು ನಾವು ಸರಕಾರಕ್ಕೆ ಮನವಿ ನೀಡುತ್ತೇವೆ. ನ್ಯಾಯಕ್ಕಾಗಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು. ವಾಹನ ಜಾಥಾ ಮೂಲಕ ತಾಲೂಕು ಕಚೇರಿವರೆಗೆ ಸಾಗಿ ತಹಶೀಲ್ದಾರ್ ಮಂಜುನಾಥ್ ರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
- Friday
- November 1st, 2024