Ad Widget

ಜಲಜೀವನ್ ಮಿಷನ್ ಕಾರ್ಯಾಗಾರ ; ನೀರಿನ ಮಿತ ಬಳಕೆ ಹಾಗೂ ಇಂಗಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ – ಶ್ರೀಪಡ್ರೆ

ಕೇವಲ ಸಂಪನ್ಮೂಲಗಳ ಬಳಕೆ ಮಾತ್ರವಲ್ಲ ಅದರ ಮಿತಬಳಕೆ ಮತ್ತು ಸದುಪಯೋಗವು ಮುಖ್ಯ, ನೀರನ್ನು ಬಳಸುವುವದರೊಂದಿಗೆ ಇಂಗಿಸುವ ಮತ್ತು ಸಂಗ್ರಹಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಜಲತಜ್ಞ , ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹೇಳಿದರು . ಅವರು ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಜಲಜೀವನ್‌ ಮಿಷನ್ ಮತ್ತು ಪುತ್ತೂರು ತಾಲೂಕು ಪಂಚಾಯತ್ ಸಹಯೋಗದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಜಲಸಾಕ್ಷರತೆ ಆಗದಿದ್ದರೆ ಮುಂದೊಂದಿನ ಬರಪೀಡಿತ ರಾಜ್ಯಗಳಂತೆ ನಾವೂ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

. . . . . .

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮತ್ತು ತಾಲೂಕು ಯೋಜನಾಧಿಕಾರಿ ಸುಕನ್ಯಾ, ಶಿಕ್ಷಣ ಇಲಾಖೆಯ ಅಧಿಕಾರಿ ಹರಿಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಕಾರ್ಯಾಗಾರಕ್ಕೆ ಶುಭಹಾರೈಸಿದರು. ಬಳಿಕ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಪುತ್ತೂರು ತಾಲೂಕಿನಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಜಿಲ್ಲಾ ಜಲಜೀವನ್ ಮಿಷನ್ ತಂಡದ ಡಿಪಿಎಮ್ ವಿಘ್ನೇಶ್ ಸೇರಿದಂತೆ, IEC/HRD ಸಂಯೋಜಕರಾದ ಶಿವರಾಮ್, ಸುರೇಶ್, ಮಹಾಂತೇಶ್ ಹಿರೇಮಠ್ , ಫಲಹಾರೇಶ್,ಚರಣ್ ರಾಜ್, ಘೋಷಿತ್ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಸಿಬ್ಬಂದಿಗಳಾದ ಸುರೇಶ್, ಭರತ್ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!