ಅರಂತೋಡು ಗ್ರಾಮದ ಬಿಳಿಯಾರು ದಿ.ಮೂಸಾ – ಸೆಮೀರಾ ದಂಪತಿಗಳ ಪುತ್ರ ಅಂಶೀದ್ (17) ಎಂಬ ಯುವಕ ಮನೆಯೊಳಗೆ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.1ರಂದು ವರದಿಯಾಗಿದೆ.
ಅಂಶೀದ್ ನ ತಾಯಿ ಮತ್ತು ಮನೆಯವರು ಎರ್ನಾಕುಲಂ ಗೆ ಹೋಗಿದ್ದರು. ಮನೆಯಲ್ಲಿ ಈತ ಒಬ್ಬನೆ ಇದ್ದನು. ಸಂಜೆ ಅರಂತೋಡಿನ ತನ್ನ ಅಜ್ಜಿಗೆ ಹೋಗಿ ಮಾತನಾಡಿ ಮನೆಗೆ ಬಂದಿದ್ದ. ರಾತ್ರಿ ತಾಯಿ ಫೋನ್ ಮಾಡಿ ಮಾತನಾಡಿದ್ದರು. ಬಳಿಕ ತಾಯಿ ಕರೆ ಮಾಡಿದಾಗ ಸ್ವೀಕಾರ ಮಾಡಿರಲಿಲ್ಲ. ಪದೇ ಪದೇ ಫೋನ್ ರಿಂಗಾದರೂ ಸ್ವೀಕರಿಸದಿದ್ದ. ಬಳಿಕ ಅರಂತೋಡಿನ ಅಜ್ಜಿ ಮನೆಗೆ ಫೋನ್ ಮಾಡಿ ಅಂಶೀದ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿದರು. ಆತನ ಮಾವ ಬಿಳಿಯಾರಿಗೆ ಬಂದು ನೋಡಿದಾಗ ಈತ ಫ್ಯಾನಿಗೆ ನೇಣು ಹಾಕಿರುವುದು ಕಂಡುಬಂದಿದೆ.