ಸರಕಾರಿ ಉನ್ನತಿಕರಿಸಿದ ಹಿ.ಪ್ರಾ. ಶಾಲೆ ಅಮರಮುಡ್ನೂರು ನಲ್ಲಿ ಮೆಂಡಾ ಫೌಂಡೇಶನ್ ಮತ್ತು ಎಸ್.ಪಿ. ಗ್ಲೋಬಲ್ ಫೌಂಡೇಶನ್ ಹಾಗೂ ಸೆಲ್ಕೋ
ಸೋಲಾರ್ ಸಹಯೋಗದೊಂದಿಗೆ ಸಮರ್ಪಣ ಚಾರಿಟಬಲ್ ಟ್ರಸ್ಟ್ ಸಹಕಾರದೊಂದಿಗೆ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಅ.1 ರಂದು ನಡೆಯಿತು .
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಪ್ರಿಯ ಮೇಲ್ತೋಟ ವಹಿಸಿದ್ದರು. ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಸ್ಮಾರ್ಟ್ ತರಗತಿಯನ್ನು ಉದ್ಘಾಟಿಸಿದರು. ಸಮಾರಂಭದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ರಮೇಶ್ ಬಿ ಇ. ಸಮನ್ವಯಧಿಕಾರಿ ಶೀತಲ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್ ಎನ್ ಮನ್ಮಥ , ಗ್ರಾ .ಪಂ ಸದಸ್ಯರಾದ ಭುವನೇಶ್ವರಿ , ರಾಧಾಕೃಷ್ಣ ಕೊರತ್ಯಡ್ಕ , ಸೀತಾ ಎಚ್ , ಸೆಲ್ಕೋ ವ್ಯವಸ್ಥಾಪಕರಾದ ಪ್ರಸಾದ್, ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಸಂಚಾಲಕಿ ಪಾರ್ವತಿ ನೇಣಾರು , ಎಸ್ ಡಿ ಎಂಸಿ ಅಧ್ಯಕ್ಷರಾದ ಈಶ್ವರ ಕಾಯರ, ಶಾಲಾ ಮುಖ್ಯ ಶಿಕ್ಷಕಿ ಉಪಸ್ಥಿತರಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರನ್ನು ಶಾಲಾ ಎಸ್ ಡಿ ಎಂಸಿ ಮತ್ತು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಸೆಲ್ಕೊ ಸೋಲಾರ್ ಶಾಖಾ ವ್ಯವಸ್ಥಾಪಕರಾದ ಆಶಿಕ್ ಹಾಗೂ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಸಂಚಾಲಕಿ ಪಾರ್ವತಿ ನೇಣಾರನ್ನು ಶಾಲಾ ಎಸ್ ಡಿ ಎಂ ಸಿ ಮತ್ತು ಊರವರ ಪರವಾಗಿ ಸನ್ಮಾನಿಸಲಾಯಿತು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.